ಇತರೆ
ಗೆಳೆಯನನ್ನು ನೋಡಲು ಬಂದ ವಿದ್ಯಾರ್ಥಿ 12 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
Views: 85
ಕನ್ನಡ ಕರಾವಳಿ ಸುದ್ದಿ:12ನೇ ಮಹಡಿಯ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆಗೈದ ಘಟನೆ ನಗರದ ಅತ್ತಾವರ ಕಾಸ ಗ್ರ್ಯಾಂಡ್ ದಲ್ಲಿ ಸಂಭವಿಸಿದೆ.
ಅತ್ತಾವರದ ಕಾಸ ಗ್ರ್ಯಾಂಡ್ ಕಟ್ಟಡದಲ್ಲಿ ಇರುವ ಗೆಳೆಯನನ್ನು ನೋಡಲು ಬಂದ ಕೆ.ಎಂಸಿ ವಿದ್ಯಾರ್ಥಿ ಸೆಕ್ಯೂರಿಟಿ ಬಳಿ ಸಹಿ ಮಾಡಿಸಿ 12 ನೇ ಮಹಡಿಗೆ ಹೋಗಿದ್ದಾನೆ.
ಅಲ್ಲಿಂದ ಮೊಬೈಲ್ ಕೆಳಗೆ ಇಟ್ಟು ಕೆಳಗೆ ಹಾರಿ ಆತ್ಮಹತ್ಯೆ ಮಾಡಿದ್ದಾನೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಆತ್ಮ ಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






