ಹೆಮ್ಮಾಡಿ ಬೈಕ್ ವ್ಹೀಲಿಂಗ್ ಪ್ರಕರಣ ಮತ್ತು ಶಿರೂರು ಕಳ್ಳತನದ ಆರೋಪಿ ವಶಕ್ಕೆ
Views: 165
ಕನ್ನಡ ಕರಾವಳಿ ಸುದ್ದಿ: ಶಿರೂರು ಗ್ರಾಮದ ಕೋಣಮಕ್ಕೆ ಎಂಬಲ್ಲಿ 25 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ಕಳ್ಳತನ ಮಾಡುವ ಉದ್ದೇಶದಿಂದ ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿ, ಮನೆಯೊಳಗಿನ ಕಪಾಟು ತೆರೆದು ಕಳ್ಳತನಕ್ಕೆ ಪಯತ್ನಿಸುತ್ತಿದ್ದಾಗ ಮನೆಯವರು ಎಚ್ಚರಗೊಂಡು ಬೊಬ್ಬೆ ಹಾಕಿದಾಗ ಹಿಂಬಾಗಿಲಿನಿಂದ ಓಡಿ ಹೋಗಿರುವುದಾಗಿದೆ. ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆಯನ್ನು ಮಾನ್ಯ ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಐ.ಪಿ.ಎಸ್. ರವರ ಅದೇಶದ ಮೇರೆಗೆ ಬೈಂದೂರು ಠಾಣೆಯ ಪಿ ಎಸ್ ಐ ರವರಾದ ಸುನೀಲ್ ಕುಮಾರ್ ಬಿ.ವೈ ರವರ ನೇತ್ರತ್ವದಲ್ಲಿ ಬೈಂದೂರು ಠಾಣೆಯ ಪಿ.ಎಸ್.ಐ ರವರಾದ ನವೀನ ಪಿ. ಬೋರಕರ ಮತ್ತು ಸಿಬ್ಬಂದಿಯವರಾದ ಹೆಚ್ ಸಿ ಚಂದ್ರಶೇಖರ, ಸಿಪಿಸಿ ಚಿದಾನಂದ, ಸಿಪಿಸಿ ಮಾಳಪ್ಪ ದೇಸಾಯಿ ಮತ್ತು ಜೀಪು ಚಾಲಕರಾದ ರಾಮದಾಸ್ ರವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿರುತ್ತದೆ.
ಈ ತಂಡವು ದಿನಾಂಕ 20.03.2026 ರಂದು ಆರೋಪಿ ಪೌಜಾನ್ ಅಹ್ಮದ್‌ನನ್ನು ವಶಕ್ಕೆ ಪಡೆದು ಬಂಧಿಸಿರುತ್ತಾರೆ.
ಬೈಕ್ ವ್ಹೀಲಿಂಗ್ ಪ್ರಕರಣದ ಆರೋಪಿ: ಮಾ.20 ರಂದು ಬೆಳಿಗ್ಗೆ ಹೆಮ್ಮಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಡಿಗೆ ಸ್ಕೂಟರ್‌ನಲ್ಲಿ ಹೆಲ್ಮೆಟ್ ಕೂಡ ಧರಿಸದೆ ಭಯಾನಕ ರೀತಿಯಲ್ಲಿ ವೀಲಿಂಗ್ ಮಾಡಿದ ಪ್ರಕರಣದಲ್ಲೂ ಇದೇ ಆರೋಪಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ವಿವಿಧ ಭಂಗಿಯಲ್ಲಿ ಸರ್ಕಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಟ್ರಾಫಿಕ್ ಪೊಲೀಸರು ತನಿಖೆ ಕೈಗೊಂಡಿದ್ದರು.






