ಇತರೆ

ವಿವಾಹಿತ ಮಹಿಳೆಯ ಅಕ್ರಮ ಸಂಬಂಧ:ಮಹಿಳೆ ಕೊಂದು  ದೇಹದ ಒಂದು ಭಾಗವನ್ನು ಫ್ರಿಡ್ಜ್‌ನಲ್ಲಿ..ಉಳಿದ ಭಾಗ ಬಚ್ಚಿಟ್ಟು ಪೊಲೀಸರಿಗೆ ಶರಣು

Views: 274

ಕನ್ನಡ ಕರಾವಳಿ ಸುದ್ದಿ: ಬಾಡಿಗೆ ಮನೆಯೊಂದರಲ್ಲಿ ನೌಕಾಪಡೆಯ ಉದ್ಯೋಗಿಯೊಬ್ಬ ತನ್ನ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಂದು, ಆಕೆಯ ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿ ಅರ್ಧ ದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ರವೀಂದ್ರ ವಿಜಯನಗರಂ ಜಿಲ್ಲೆಯ ರಾಜಂ ಮೂಲದವನಾಗಿದ್ದು, ನೌಕಾಪಡೆಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಆರೋಪಿ ರವೀಂದ್ರ ಪತ್ನಿ ತವರು ಮನೆ ಸೇರಿದ್ದರಿಂದ ಮೌನಿಕಾ(28) ಎಂಬ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು.

ಇತ್ತೀಚೆಗೆ, ಮೌನಿಕಾ ಹಣಕ್ಕಾಗಿ ಒತ್ತಡ ಹೇರುತ್ತಿದ್ದಳು, ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. ರವೀಂದ್ರ ಮೌನಿಕಾಳನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕೊಲೆಯ ನಂತರ ವಾಸನೆ ಬರದಂತೆ ತಡೆಯಲು ಮತ್ತು ಸಾಕ್ಷ್ಯ ನಾಶಪಡಿಸಲು ಆರೋಪಿಯು ಮಹಿಳೆಯ ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿದ್ದನು. ದೇಹದ ಒಂದು ಭಾಗವನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಟ್ಟರೆ, ಇನ್ನುಳಿದ ಅರ್ಧ ಭಾಗವನ್ನು 1 ಬಂಡಲ್‌ನಲ್ಲಿ ಸುತ್ತಿ ಮನೆಯ ಒಂದು ಮೂಲೆಯಲ್ಲಿ ಬಚ್ಚಿಟ್ಟು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದಾರೆ.

Related Articles

Back to top button
error: Content is protected !!