ಅಮೆರಿಕದ ಅತ್ಯಂತ ದುಬಾರಿ 2,500 ಕೋಟಿ ರೂ. ಮೌಲ್ಯದ ವಿಮಾನ ಧ್ವಂಸ ಮಾಡಿದ ಇರಾನ್
Views: 98
ಕನ್ನಡ ಕರಾವಳಿ ಸುದ್ದಿ: ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಪ್ರಿನ್ಸ್ ಸುಲ್ತಾನ್ ಏರ್ ಬೇಸ್ ಮೇಲೆ ಇರಾನ್ ಕ್ಷಿಪಣಿ ಮತ್ತು ಡೋನ್ ದಾಳಿ ನಡೆಸಿದ್ದು, ಅಮೆರಿಕದ ಅತ್ಯಂತ ದುಬಾರಿ ಮತ್ತು ವಿಮಾನವನ್ನು ಧ್ವಂಸಗೊಳಿಸಿರುವುದಾಗಿ ಇರಾನ್ ಹೇಳಿದೆ.
ಇದರ ಬೆನ್ನಲ್ಲೇ ಇಸ್ರೇಲ್ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳನ್ನು ಗುರಿಯಾಗಿಸುವ ಬೆದರಿಕೆಯನ್ನು ಇರಾನ್ ಹಾಕಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಆತ್ಮಹತ್ಯಾ ಡೋನ್‌ಗಳ ಮೂಲಕ ದಾಳಿ ಮಾಡಿದೆ.
ಸುಮಾರು 2,500 ಕೋಟಿ ರೂಪಾಯಿ ಮೌಲ್ಯದ ಅಮೆರಿಕದ ಈ ವಿಮಾನವು ರೇಡಾರ್ ವ್ಯವಸ್ಥೆಯ ಶಕ್ತಿಯಾಗಿದ್ದು, ಇದನ್ನು ಇರಾನ್ ಎರಡು ಭಾಗಗಳನ್ನಾಗಿ ಮಾಡಿದೆ ಎಂದು ವರದಿಯಾಗಿದೆ.
ಭೀಕರ ದಾಳಿಯಲ್ಲಿ ಕನಿಷ್ಠ 10 ಅಮೆರಿಕನ್ ಸೈನಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವವಿದ್ಯಾಲಯಗಳ ಮೇಲೆ ದಾಳಿಯ ಎಚ್ಚರಿಕೆ!
ಇರಾನ್‌ನ ವಿಶ್ವವಿದ್ಯಾಲಯಗಳ ಮೇಲೆ ಅಮೆರಿಕ-ಇಸ್ರೇಲ್ ದಾಳಿ ನಡೆಸಿವೆ ಎಂದು ಆರೋಪಿಸಿರುವ IRGC, ಈಗ ಪ್ರತೀಕಾರವಾಗಿ ಇಸ್ರೇಲ್ ಮತ್ತು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಶೈಕ್ಷಣಿಕ ಸಂಸ್ಥೆಗಳನ್ನು ಕಾನೂನುಬದ್ಧ ಮಿಲಿಟರಿ ಗುರಿ ಎಂದು ಘೋಷಿಸಿದೆ.
ದಾಳಿಯನ್ನು ಖಂಡಿಸದಿದ್ದರೆ, ನಾವು ಇಸ್ರೇಲಿ ವಿಶ್ವವಿದ್ಯಾಲಯಗಳ ಮೇಲೆ ದಾಳಿ ಮಾಡುತ್ತೇವೆ. ಅಲ್ಲಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ತಕ್ಷಣವೇ ಕ್ಯಾಂಪಸ್‌ಗಳಿಂದ ದೂರವಿರಿ ಎಂದು ಇರಾನ್ ಎಚ್ಚರಿಸಿದೆ.
ಇದೇ ವೇಳೆ ಯೆಮನ್‌ನ ಹೌತಿ ಬಂಡುಕೋರರು ಕೂಡ ಯುದ್ಧಕ್ಕೆ ಧುಮುಕಿದ್ದು, ಇಸ್ರೇಲ್ ಮೇಲೆ ಎರಡನೇ ಹಂತದ ಕ್ಷಿಪಣಿ ದಾಳಿ ನಡೆಸಿದ್ದಾರೆ. ದಕ್ಷಿಣ ಇಸ್ರೇಲ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಡೋನ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಲಾಗಿದ್ದು, ಯುದ್ಧವು ಇಡೀ ಕೆಂಪು ಸಮುದ್ರಕ್ಕೆ ಹರಡುವ ಭೀತಿ ಎದುರಾಗಿದೆ,






