ಕುಂದಾಪುರ: ಗ್ಯಾಸ್ ಕೊರತೆಯಿಂದ ಕರಾವಳಿಯಲ್ಲಿ ಹೊಟೇಲ್‌ಗಳು ಬಂದ್, ಸಂಕಷ್ಟದಲ್ಲಿ ಮೀನು ವ್ಯಾಪಾರಸ್ಥರು
Views: 123
ಕನ್ನಡ ಕರಾವಳಿ ಸುದ್ದಿ:ವಾಣಿಜ್ಯ ಅಡುಗೆ ಅನಿಲ ವ್ಯತ್ಯಯದಿಂದಾಗಿ ಕರಾವಳಿಯಲ್ಲಿ ಮೀನುಗಾರಿಕೆಗೆ ಹೊಡೆತ ಬಿದ್ದಿದೆ. ಮೀನುಗಾರರು ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಗ್ಯಾಸ್ ಅಭಾವದಿಂದ ಬಹುತೇಕ ಮೀನು ಊಟದ ಹೊಟೇಲ್ಗಳು ಬಂದ್ ಆಗಿರುವುದರಿಂದ ಮೀನಿಗೆ ಬೇಡಿಕೆ ಕಡಿಮೆಯಾಗಿದೆ. ಮೀನು ಮಾರಾಟ ಮಾಡುವ ಮಹಿಳೆಯರು ವ್ಯಾಪಾರ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಪ್ರತೀ ದಿನ ಲಕ್ಷಾಂತರ ರೂ. ಗಳ ಮೀನು ಖರೀದಿಸುತ್ತಿದ್ದ ಹೊಟೇಲ್‌ಗಳ ಮಾಲೀಕರು ಈಗ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಮೀನುಗಾರ ಮಹಿಳೆಯರ ದಿನದ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಇದರಿಂದ ಮಾರುಕಟ್ಟೆಯಲ್ಲಿ ಕೆಲವೊಂದು ದುಬಾರಿ ಮೀನಿನ ದರ ಸುಮಾರು 100ರಿಂದ 150 ರೂ. ಗಳಷ್ಟು ಇಳಿಕೆಯಾಗಿದೆ. ಗ್ಯಾಸ್ ಅಭಾವಕ್ಕೂ ಮುನ್ನ ನಗರ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ಎಲ್ಲ ಹೊಟೇಲ್‌ಗಳಿಗೆ ಪ್ರತೀದಿನ ಟನ್‌ಗಟ್ಟಲೆ ಮೀನುಗಳು ಪೂರೈಕೆಯಾಗುತ್ತಿದ್ದವು. ಆದರೆ ಕಳೆದ ಎರಡು ವಾರಗಳಿಂದ ಗ್ಯಾಸ್ ಅಭಾವದಿಂದ ಬಹುತೇಕ ಮೀನಿನ ಹೊಟೇಲುಗಳು ಬಂದ್ ಆಗಿವೆ.






