ಇತರೆ
ಈಜಾಡುತ್ತಿರುವಾಗ ಹಠಾತ್ ಹೃದಯಾಘಾತ: ಸೇನಾಧಿಕಾರಿ ಸಾವು
Views: 35
ಕನ್ನಡ ಕರಾವಳಿ ಸುದ್ದಿ: ಸ್ವಿಮಿಂಗ್ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿಯ ನಾನಾವಾಡಿಯ ಕಮಾಂಡೋ ವಿಂಗ್ ಆವರಣದಲ್ಲಿ ಸ್ವಿಮಿಂಗ್ ಪೂಲ್ ನಲ್ಲಿ ಸ್ವಿಮ್ ಮಾಡುತ್ತಿದ್ದಾಗ ಹೃದಯಘಾತದಿಂದ ಸೇನಾಧಿಕಾರಿ ಮೃತಪಟ್ಟಿದ್ದಾರೆ.
ಹರಿಯಾಣ ಮೂಲದ ಲೆಫ್ಟಿನೆಂಟ್ ಅಮಿತ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ ಸೇನಾಧಿಕಾರಿ.
ಬೆಳಗಾವಿಯ ಎಂಎಲ್ ಆರ್ ಸಿ ಕಮಾಂಡೋ ವಿಂಗ್ ನಲ್ಲಿ ಟ್ರೇನಿಂಗ್ ಅಧಿಕಾರಿಯಾಗಿದ್ದರು.
ಸ್ವಿಮಿಂಗ್ ಮಾಡುತ್ತಿದ್ದಾಗ ಅಮಿತ್ ಸಿಂಗ್ ಹೃದಯಗಹಾತಕ್ಕೊಳಗಾಗಿದ್ದಾರೆ. ತಕ್ಷಣ ಲೈಫ್ ಗಾರ್ಡ್ ಪ್ರದೀಪ್ ಕುಮಾರ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.






