ಇತರೆ

ಲಿವ್-ಇನ್ ರಿಲೇಶನ್‌ಶಿಪ್ ನಲ್ಲಿದ್ದ ಪ್ರಿಯತಮೆಯ ಕೊಲೆ ಮಾಡಿದ ಪ್ರಿಯಕರ 

Views: 107

ಕನ್ನಡ ಕರಾವಳಿ ಸುದ್ದಿ:ಪ್ರಿಯಕರನೊಬ್ಬತನ್ನ ಪ್ರಿಯತಮೆಯನ್ನು ವೈರ್‌ನಿಂದ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ,ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಡತಿ ಬಳಿ ನಡೆದಿದೆ.

ಕೊಡಗು ಮೂಲದ ರಂಜಿತಾಳನ್ನು (23) ಆರೋಪಿ ಅಯ್ಯಪ್ಪ ಎಂಬಾತ ಕೊಲೆ ಮಾಡಿದ್ದಾನೆ. ಇಬ್ಬರು ಲಿವ್‌ ಇನ್‌ ರಿಲೇಶನ್ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ. ರಂಜಿತ ಮತ್ತು ಅಯ್ಯಪ್ಪ ಕೊಡಗು ಜಿಲ್ಲೆಯ ನಿವಾಸಿಗಳಾಗಿದ್ದು, ಮದುವೆಯಾಗಿ ಹೆಂಡತಿಯನ್ನು ಅಯ್ಯಪ್ಪ ಬಿಟ್ಟಿದ್ದ. ಡ್ರೈ ಫ್ರೂಟ್ ಅಂಗಡಿಯಲ್ಲಿ ಆರೋಪಿ ಅಯ್ಯಪ್ಪ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ.

ಅಯ್ಯಪ್ಪನನ್ನೆ ಮದುವೆಯಾಗುವುದಾಗಿ ರಂಜಿತ ಮನೆ ಬಿಟ್ಟು ಬಂದಿದ್ದಾಳೆ. ಪತ್ನಿಗೆ ವಿಚ್ಛೇದನ ನೀಡದೆ ಅಯ್ಯಪ್ಪ ರಂಜಿತಾ ಜೊತೆಗೆ ವಾಸವಿದ್ದ. ಇದೀಗ ಮದುವೆ ವಿಚಾರಕ್ಕೆ ರಂಜಿತ ಹಾಗೂ ಅಯ್ಯಪ್ಪನ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಅಯ್ಯಪ್ಪ ರಂಜಿತಾಳ ಕುತ್ತಿಗೆಗೆ ವೈರ್‌ ಬಿಗಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ವರ್ತೂರು ಠಾಣೆ ಪೋಲಿಸರು ಆರೆಸ್ಟ್ ಮಾಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!