ಸಾಂಸ್ಕೃತಿಕ

ಮಗಳು ಲವ್ ಜಿಹಾದ್‌ಗೆ ಬಲಿ: ತಂದೆ ಆರೋಪ

Views: 100

ಕನ್ನಡ ಕರಾವಳಿ ಸುದ್ದಿ: ಕಳೆದ ವರ್ಷ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಫೋಟೋ ವೈರಲ್ ಆಗುವ ಮೂಲಕ ಖ್ಯಾತಿ ಗಳಿಸಿ, ಎರಡು ದಿನಗಳ ಹಿಂದೆ ಮುಸ್ಲಿಂ ಪ್ರೇಮಿ ಫರ್ಮನ್ ಖಾನ್ ಅವರನ್ನು ಕೇರಳದಲ್ಲಿ ಮದುವೆಯಾಗಿ ಸುದ್ದಿಯಾಗಿದ್ದ ಮೊನಲಿಸಾಳ ತಂದೆ ಇದೀಗ ಮಧ್ಯ ಪ್ರದೇಶ ಸಿಎಂ ಮೊರೆ ಹೋಗಿದ್ದಾರೆ. ತನ್ನ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ತನ್ನ ಮಗಳನ್ನು ಸುರಕ್ಷಿತವಾಗಿ ಮರಳಿ ರಾಜ್ಯಕ್ಕೆ ಕರೆತರಬೇಕು ಎಂದು ಶುಕ್ರವಾರ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಮನವಿ ಮಾಡಿದ್ದಾರೆ.

ಖಾರ್ಗೋನ್‌ ಮಹೇಶ್ವರ ಪಟ್ಟಣದ ಅಲೆಮಾರಿ ಪಾರ್ಧಿ ಸಮುದಾಯದ ಮೊನಾಲಿಸಾ ಕೇರಳದ ಅರುಮನೂರಿನ ನೈನಾರ್ ದೇವಸ್ಥಾನದಲ್ಲಿ ಫರ್ಮಾನ್ ಖಾನ್ ಅವರೊಂದಿಗೆ ವಿವಾಹವಾಗಿದ್ದಾರೆ.

ಕೇರಳದಿಂದ ಹಿಂದಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ ತಂದೆ ಜಯಸಿಂಗ್ ಭೋಂಸ್ಥೆ, ನನ್ನ ಮಗಳು ದೇಶಾದ್ಯಂತ ಹೆಸರು ಗಳಿಸಿದ್ದಾಳೆ. ಮೊನಾಲಿಸಾಳನ್ನು ಸುರಕ್ಷಿತವಾಗಿ ಮಧ್ಯ ಪ್ರದೇಶಕ್ಕೆ ಕರೆತರುವಂತೆ ಮುಖ್ಯ ಮಂತ್ರಿ ಮೋಹನ್ ಯಾದವ್ ಅವರಿಗೆ ವಿನಂತಿಸುತ್ತೇನೆ. ಫರ್ಮಾನ್ ಖಾನ್ ಎಂಬ ಮುಸ್ಲಿಂ ಯುವಕ ಅವಳನ್ನು ಮೋಸದಿಂದ ಮದುವೆ ಆಗಿದ್ದಾನೆ. ಇದು ಲವ್ ಜಿಹಾದ್ ಪ್ರಕರಣ ಎಂದು ಜಯಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ನನ್ನ ಮಗಳು ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ ಎಂದು ನನಗೆ ಹೇಳಲಾಯಿತು. ಕೆಲವರು ತನಗೆ ನಟನೆ ಮತ್ತು ನೃತ್ಯವನ್ನು ಕಲಿಸುತ್ತಿದ್ದಾರೆಂದು ಅವಳು ಸ್ವತಃ ಹೇಳಿದ್ದಳು.

ಭವಿಷ್ಯದಲ್ಲಿ ಅವಳು ಚಿಲನಚಿತ್ರಗಳಲ್ಲಿ ಅಭಿನಯಿಸಲು  ಸಾಧ್ಯವಾಗುವಂತೆ ತರಬೇತಿ ನೀಡುವುದಾಗಿ ಅವರು ಹೇಳಿದ್ದರು, ಆದರೆ ಈ ರೀತಿ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ ಎಂದಿದ್ದಾರೆ.

ಲವ್ ಜಿಹಾದ್‌ ಅಲ್ಲ: ಮೊನಾಲಿಸಾ

ಫರ್ಮಾನ್‌ ಖಾನ್ ಜೊತೆ ಮದುವೆಯಾಗಿರುವ ಮೊನಾಲಿಸಾ, ತನ್ನ ವಯಸ್ಸಿನ ಬಗ್ಗೆ ಸ್ಪಷ್ಟನೆ ನೀಡಿದ್ದಾಳೆ. ‘ನನಗೆ ಈಗ 18 ವರ್ಷ, ನಾನು ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದೇನೆ. ಇದು ಲವ್ ಜಿಹಾದ್ ಅಲ್ಲ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಮತ್ತು ಪ್ರತಿಯೊಂದು ಧರ್ಮ ವನ್ನು ಸಮಾನವೆಂದು ಪರಿಗಣಿಸುತ್ತೇನೆ’ ಎಂದು ಹೇಳಿದ್ದಾರೆ.

Related Articles

Back to top button
error: Content is protected !!