ಇತರೆ

ಲಿವ್-ಇನ್ ಸಂಬಂಧದಲ್ಲಿದ್ದ ಪೊಲೀಸ್ ಮದುವೆಯಾಗಲು ನಿರಾಕರಣೆ: ಯುವತಿ ಆತ್ಮಹತ್ಯೆ

Views: 40

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಆಗ್ರಾದಲ್ಲಿ 4 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿ ಇದ್ದ ಪೊಲೀಸ್ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ಯುವತಿ ಆತ್ಮಹತ್ಯೆ ಶರಣಾಗಿದ್ದಾಳೆ.

ವರದಿಗಳ ಪ್ರಕಾರ, ಯುವತಿ ಜೆ.ವಿ.ಗೌತಂ ಎಂಬ ಪೊಲೀಸ್ ಜೊತೆ 4 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದಳು. ಮದುವೆ ಮಾಡಿಕೊಳ್ಳುವ ಭರವಸೆ ನೀಡಿ, ಈಗ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈಗ ಆತ ಮತ್ತೊಬ್ಬರನ್ನು ಮದುವೆಯಾಗಲು ಸಜ್ಜಾಗಿದ್ದಾನೆ.

ದುಡಕಿನ ನಿರ್ಧಾರಕ್ಕೂ ಮೊದಲು ಯುವತಿ ವಿಡಿಯೋ ಸಂದೇಶವೊಂದನ್ನು ಹೊರಬಿಟ್ಟು, ತನ್ನ ಸಾವಿಗೆ ಪೊಲೀಸ್ ಕಾರಣ ಎಂದು ಆರೋಪಿಸಿದ್ದಾಳೆ. ತಾನು ನ್ಯಾಯಕ್ಕಾಗಿ ಹಲವು ಬಾರಿ ಪ್ರಯತ್ನಿಸಿದ್ದರೂ ಸಹಾಯ ಸಿಗಲಿಲ್ಲ ಎಂದು ಕೂಡ ವಿಡಿಯೋದಲ್ಲಿ ಹೇಳಿದ್ದಾಳೆ.

ಘಟನೆ ಬೆಳಕಿಗೆ ಬಂದ ನಂತರ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿದೆ. ಯುವತಿಯ ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

Related Articles

Back to top button
error: Content is protected !!