ಕೃಷಿ

ಪಿಎಂ ಕಿಸಾನ್ ಕಂತಿನ ರೂ.2,000 ಇಂದು ರೈತರ ಖಾತೆಗೆ ಬಿಡುಗಡೆ

Views: 41

ಕನ್ನಡ ಕರಾವಳಿ ಸುದ್ದಿ: ದೇಶದ ಅನ್ನದಾತರಿಗೆ ಕೇಂದ್ರ ಸರ್ಕಾರವು ಯುಗಾದಿ ಹಬ್ಬದ ಸಂಭ್ರಮಕ್ಕೂ ಮುನ್ನವೇ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬಹುಕಾಲದಿಂದ ಕಾಯುತ್ತಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣ ಇಂದು ಬಿಡುಗಡೆಯಾಗಿದೆ.ಮಾರ್ಚ್ 13, 2026 ರಂದು ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ತಲುಪಲಿದೆ.

ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ಬಟನ್ ಒತ್ತುವ ಮೂಲಕ ಈ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಬಾರಿ ಒಟ್ಟು 9.32 ಕೋಟಿ ಅರ್ಹ ರೈತ ಕುಟುಂಬಗಳಿಗೆ ಸುಮಾರು 18,640 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ವಿತರಿಸಲಾಗುತ್ತಿದೆ. ಕೃಷಿ ಚಟುವಟಿಕೆಗಳ ವೆಚ್ಚ ನಿಭಾಯಿಸಲು ಈ ಆರ್ಥಿಕ ನೆರವು ರೈತರಿಗೆ ದೊಡ್ಡ ಆಸರೆಯಾಗಲಿದೆ.

Related Articles

Back to top button
error: Content is protected !!