ಇತರೆ

ಮದುವೆಯ ಒತ್ತಡದಿಂದ ಪಾರಾಗಲು ತಲೆಬೋಳಿಸಿಕೊಂಡ ಯುವತಿ!

Views: 64

ಕನ್ನಡ ಕರಾವಳಿ ಸುದ್ದಿ. ಮನೆಯವರ ಮದುವೆ ಒತ್ತಡದಿಂದ ಪಾರಾಗಲು ಯುವತಿಯೊಬ್ಬಳು ಸಂಪೂರ್ಣವಾಗಿ ತಲೆಬೋಳಿಸಿಕೊಂಡಿರುವ ಘಟನೆ ವರದಿಯಾಗಿದೆ.

ಇನ್‌ಸ್ಟಾಗ್ರಾಮ್ ಬಳಕೆದಾರರಾದ ಕಾಜಲ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಕೇವಲ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ವಿಡಿಯೋದಲ್ಲಿ ಮಾತನಾಡುತ್ತಾ ತನ್ನ ಅಸಹಾಯಕತೆಯನ್ನು ತೋಡಿಕೊಂಡಿರುವ ಅವರು, ತನಗೆ ತನ್ನ ಕೂದಲೆಂದರೆ ಪಂಚಪ್ರಾಣವಾಗಿತ್ತು, ಆದರೆ ನಿರಂತರವಾಗಿ ಮದುವೆ ಮಾಡಿಕೊಳ್ಳುವಂತೆ ಪೋಷಕರು ಮತ್ತು ಸಂಬಂಧಿಕರು ನೀಡುತ್ತಿದ್ದ ಒತ್ತಡ ತಡೆಯಲಾರದೆ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ತಲೆ ಬೋಳಿಸಿಕೊಂಡರೆ ತನ್ನನ್ನು ಯಾರೂ ಮದುವೆಯಾಗಲು ಮುಂದೆ ಬರುವುದಿಲ್ಲ ಮತ್ತು ಮನೆಯವರಿಂದ ಒತ್ತಡ ತಪ್ಪಬಹುದು ಎಂಬ ಆಲೋಚನೆಯಿಂದ ಈ ಸಾಹಸಕ್ಕೆ ಕೈಹಾಕಿದ್ದಾರೆ.

ಮದುವೆ ಎನ್ನುವುದು ಪರಸ್ಪರ ಒಪ್ಪಿಗೆಯಿಂದ ನಡೆಯಬೇಕಾದ ಸಂಭ್ರಮವಾಗಬೇಕೇ ಹೊರತು, ಈ ರೀತಿಯ ಒತ್ತಾಯದ ಹೇರಿಕೆಯಾಗಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Related Articles

Back to top button
error: Content is protected !!