ಇತರೆ

ನಿವೃತ್ತ ಮುಖ್ಯ ಶಿಕ್ಷಕ ಹಳ್ನಾಡು ವಿಶ್ವನಾಥ ಶೆಟ್ಟಿ ನಿಧನ 

Views: 43

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಗ್ರಾಮದ ಬೈಲೂರು ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕ ಹಳ್ನಾಡು ವಿಶ್ವನಾಥ ಶೆಟ್ಟಿ (90) ಮಾ.8 ರಂದು ಹೃದಯಾಘಾತದಿಂದ ನಿಧನರಾದರು.

ಮೃತರು ಪುತ್ರರಾದ ಯುವ ಮೆರಿಡಿಯನ್ ಗ್ರೂಪ್ಸ್ ಆಫ್ ಕಂಪೆನಿಯ ಪಾಲುದಾರರಾದ ಬೈಲೂರು ಉದಯ್ ಕುಮಾರ್ ಶೆಟ್ಟಿ ಹಾಗೂ ಬೈಲೂರು ವಿನಯ್ ಕುಮಾರ್‌ಶೆಟ್ಟಿ ಅವರನ್ನು ಅಗಲಿದ್ದಾರೆ.

ಶಂಕರ ನಾರಾಯಣ, ಮೂಡುಬಗೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಬೈಲೂರು ಸರಕಾರಿ ಹಿ. ಪ್ರಾ. ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಸುಮಾರು 35 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

Related Articles

Back to top button
error: Content is protected !!