ನಟ ದಳಪತಿ ವಿಜಯ ಪತ್ನಿಗೆ 250 ಕೋಟಿ ರೂ. ಜೀವನಾಂಶ ನೀಡಲು ನಿರ್ಧಾರ
Views: 38
ಕನ್ನಡ ಕರಾವಳಿ ಸುದ್ದಿ:ತಮಿಳು ನಟ ದಳಪತಿ ವಿಜಯ ಪತ್ನಿ ಸಂಗೀತಾ ಸ್ವರ್ಣಲಿಂಗಮ್ ಈಗಾಗಲೇ ವಿವಾಹ ವಿಚ್ಛೇದನ ಕೋರಿ ಚೆಂಗಲ್ ಪಟ್ಟು ಕೌಟುಂಬಿಕ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಪತಿ ವಿಜಯ ವಿವಾಹೇತರ ಸಂಬಂಧ ಹೊಂದಿದ್ದಾರೆ. ಹೀಗಾಗಿ ವಿವಾಹ ವಿಚ್ಛೇದನ ಮಂಜೂರು ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ವಿವಾಹ ವಿಚ್ಛೇದನವನ್ನು ಕೋರ್ಟ್ ನ ಆಚೆಗೆ ಬಗೆಹರಿಸಿಕೊಳ್ಳಲು ನಟ ವಿಜಯ ಆಸಕ್ತಿ ಹೊಂದಿದ್ದಾರೆ ಎಂದು ಗೊತ್ತಾಗಿದೆ. ಪರಸ್ಪರ ಸಮ್ಮತಿಯ ಮೇರೆಗೆ ಪತ್ನಿ ಸಂಗೀತಾ ವಿವಾಹ ವಿಚ್ಛೇದನ ಕೋರಿದ್ದಾರೆ.
ಆದರೇ, ವಿಜಯ ಪ್ರಾರಂಭದಲ್ಲಿ ವಿವಾಹ ವಿಚ್ಛೇದನ ನೀಡಲು ಸಿದ್ದವಿರಲಿಲ್ಲ. ವಿವಾಹ ವಿಚ್ಛೇದನದಿಂದ ತಮ್ಮ ಈಗಷ್ಟೇ ಆರಂಭಿಸಿರುವ ರಾಜಕೀಯ ವೃತ್ತಿ ಬದುಕಿಗೆ ಹೊಡೆತ ಬೀಳುತ್ತೆ ಎಂಬ ಭಯ ಇತ್ತಂತೆ. ಆದರೇ, ಪತ್ನಿ ಸಂಗೀತಾ ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಈಗ ನಟ ವಿಜಯ ತಮ್ಮ ಮನಸ್ಸು ಬದಲಾಯಿಸಿದ್ದಾರೆ. ಪತ್ನಿ ಸಂಗೀತಾ, ಪುತ್ರ ಜಾಸನ್ ಸಂಜಯ್, ದಿವ್ಯಾ ಶಾಸಾಗೆ 250 ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿದ್ದಾರಂತೆ. ಈ 250 ಕೋಟಿ ರೂಪಾಯಿ ಹಣವನ್ನು ಹೆಂಡತಿ ಮತ್ತು ಇಬ್ಬರ ಮಕ್ಕಳ ನಡುವೆ ಹಂಚಿಕೆ ಮಾಡಬೇಕಾಗುತ್ತೆ. ಸಂಗೀತಾ 1999 ರ ಆಗಸ್ಟ್ ನಲ್ಲಿ ನಟ ವಿಜಯ ಅವರನ್ನು ಇಷ್ಟಪಟ್ಟು ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು.
ಇನ್ನೂ ನಟ ವಿಜಯಗೆ ಓರ್ವ ನಟಿಯ ಜೊತೆ ವಿವಾಹೇತರ ಸಂಬಂಧ ಇದೆ ಎಂದು ಪತ್ನಿ ಸಂಗೀತಾ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ. ಆದರೇ, ಆ ನಟಿಯ ಹೆಸರು ಅನ್ನು ಬಹಿರಂಗಪಡಿಸಿಲ್ಲ. ನಟಿ ತ್ರಿಶಾ ಜೊತೆ ವಿಜಯಗೆ ಅಫೇರ್ ಇದೆ. ಇಬ್ಬರು ಜೊತೆಯಾಗಿ ಒಂದೇ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಹೀಗಾಗಿ ಈಗ ಪತ್ನಿ ಸಂಗೀತಾ ರೊಚ್ಚಿಗೆದ್ದು ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ ಪತ್ನಿ ಸಂಗೀತಾ ಮೂಲತಃ ಶ್ರೀಲಂಕನ್ ತಮಿಳು. ವಿದೇಶದಲ್ಲಿದ್ದರು. ವಿಜಯಗೆ ಫ್ಯಾನ್ ಆಗಿ ಬಂದು, ಬಳಿಕ ವಿವಾಹವಾದವರು. ಈಗ ವಿವಾಹ ವಿಚ್ಛೇದನ ಹಂತಕ್ಕೆ ತಲುಪಿದ್ದಾರೆ.






