ಮಾಹಿತಿ ತಂತ್ರಜ್ಞಾನ
ಕುಂದಾಪುರ: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಮೆಸ್ಕಾಂ ಸಿಬ್ಬಂದಿಗೆ 5.39 ಲಕ್ಷ ರೂ.ವಂಚನೆ
Views: 141
ಕನ್ನಡ ಕರಾವಳಿ ಸುದ್ದಿ: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭನೀಡುವುದಾಗಿ ನಂಬಿಸಿ ಇಲ್ಲಿನ ಮೆಸ್ಕಾಂ ಸಿಬ್ಬಂದಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಮೂಲದ ಪರಶುರಾಮ್ ಲಮಾಣಿ(29) ಎಂಬವರಿಗೆ ಫೆ.18ರಂದು ಅಪರಿಚಿತರು ಕರೆ ಮಾಡಿ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ತಿಳಿಸಿದರು. ಇದನ್ನು ನಂಬಿದ ಅವರು, ವಿವಿಧ ಹಂತಗಳಲ್ಲಿ ಬೇರೆ ಬೇರೆ ಖಾತೆಗಳಿಗೆ ಒಟ್ಟು 5,39,200ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ಪರಶುರಾಮ್ ಅವರಿಗೆ ಯಾವುದೇ ಹಣವನ್ನು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.






