ಯುವಜನ

ಮೂರು ಬೇರೆ ಬೇರೆ ಹೆಸರುಗಳನ್ನು ಬಳಸಿಕೊಂಡು ಯುವಕರಿಗೆ ಪ್ರೀತಿ: ಲಕ್ಷಾಂತರ ರೂ.ವಂಚನೆ, ಲಾಕ್ ಆದ ಯುವತಿ 

Views: 74

ಕನ್ನಡ ಕರಾವಳಿ ಸುದ್ದಿ: ಯುವತಿಯೊಬ್ಬಳು ಐಶ್ವರ್ಯಾ, ರೇಣುಕಾ ಮತ್ತು ಆರೋಹಿ ಎಂಬ ಮೂರು ಬೇರೆ ಬೇರೆ ಹೆಸರುಗಳನ್ನು ಬಳಸಿಕೊಂಡು ಯುವಕರಿಗೆ ಪ್ರೀತಿಯ ಜಾಲ ಬೀಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಧಾರಾವಾಡದ ಯುವತಿ ಐಶ್ವರ್ಯ, ರೇಣುಕಾ ಮತ್ತು ಆರೋಹಿ ಎಂಬ ಮೂರು ಹೆಸರುಗಳಲ್ಲಿ ಯುವಕರೊಂದಿಗೆ ಪರಿಚಯ ಆಗುತ್ತಿದ್ದಳು.

ಯುವಕರನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸುತ್ತಿದ್ದಳು. ಈಕೆಯ ನಕಲಿ ಪ್ರೀತಿಗೆ ಅಂಧನಾದ ಗುರು ವಕ್ಕಂದ್ ಎಂಬಾತ ಐಶ್ವರ್ಯನೇ ಬೇಕು ಎಂದು ಮನನೊಂದು ವಿಷ ಸೇವಿಸಿದ್ದ.

ಮದುವೆಯಾಗುವುದಾಗಿ ಗುರು ಬಳಿ 7 ಲಕ್ಷ ರೂಪಾಯಿ ತೆಗೆದುಕೊಂಡಿದ್ದಳು. ಕೈಗೆ ಹಣ ಬರುತ್ತಿದ್ದಂತೆ ಐಶ್ವರ್ಯ ತನ್ನ ನಡೆ ಬದಲಿಸಿದ್ದಾಳೆ. ಇದರಿಂದ ನೊಂದ ಗುರು ವಿಷ ಸೇವಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆ ವೇಳೆ ಆರೋಗ್ಯ ವಿಚಾರಿಸಲು ಬಂದ ಐಶ್ವರ್ಯಳನ್ನು ಗುರು ಕುಟುಂಬಸ್ಥರು ಲಾಕ್ ಮಾಡಿದ್ದಾರೆ.

ನನ್ನ ಮಗನನ್ನು ಮದುವೆ ಆಗಬೇಕು ಅಥವಾ 7 ಲಕ್ಷ ರೂಪಾಯಿ ವಾಪಸ್‌ ಕೊಡಬೇಕು ಎಂದು ಗುರು ತಾಯಿ ರತ್ನವ್ವ ಆರೋಪಿಸಿದ್ದಾರೆ. ಐಶ್ವರ್ಯಾಗೆ ಮದುವೆಯಾಗಿ ಒಂದು ಮಗುವಿದೆ. ಈಗ ಗಂಡನಿಂದ ಡಿವೋರ್ಸ್ ಪಡೆದುಕೊಂಡಿದ್ದಾಳೆ. ಹೆಸರು ಬದಲಿಸಿಕೊಂಡು ಮೋಸ ಮಾಡ್ತಿದ್ದಾಳೆ ಎಂದು ಗುರು ತಾಯಿ ಹೇಳಿದ್ದಾರೆ. ಬಳಿಕ ಗುರು ಪೋಷಕರು ಐಶ್ವರ್ಯಳನ್ನು ಪೊಲೀಸರ ವಶಕ್ಕೆ ನೀಡಿದ್ದು, ಧಾರವಾಡದ ಶಹರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!