ಇತರೆ

ಲೀವ್-ಇನ್-ಟುಗೆದರ್ ಸಂಬಂಧ: ಹೆತ್ತ ಮಗುವನ್ನೇ 5 ಲಕ್ಷಕ್ಕೆ ಮಾರಿದ ಕಿರಾತಕರು!

Views: 90

ಕನ್ನಡ ಕರಾವಳಿ ಸುದ್ದಿ: ಲೀವ್-ಇನ್-ಟುಗೆದರ್ ಸಂಬಂಧದಲ್ಲಿದ್ದ ತಮಗೆ ಹುಟ್ಟಿದ ಗಂಡು ಮಗುವನ್ನು ಮಾರಾಟ ಮಾಡಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.

ನೀತು ಎಂಬ ಮಹಿಳೆ ಮದುವೆ ಆಗಿ ಎರಡು ಮಕ್ಕಳಿದ್ರೂ ಸಹ ಗಂಡನ ಬಿಟ್ಟು ಚಾಲಕನ ಕೆಲಸ ಮಾಡುತ್ತಿದ್ದ ರಾಘವೇಂದ್ರ ಎಂಬಾತನ ಜತೆ ಶ್ರೀನಿವಾಸ ಪಟ್ಟಣದಲ್ಲಿ ಸಂಸಾರ ಮಾಡುತ್ತಿದ್ದಳು. ಇವರಿಬ್ಬರಿಗೆ ಕಳೆದ ಆರು ತಿಂಗಳ ಹಿಂದೆ ಶ್ರೀನಿವಾಸ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿದೆ. ಹಣದ ಆಸೆಗೆ ಹುಟ್ಟಿದ ಮೂರೇ ದಿನದಲ್ಲಿ ಮಗುವನ್ನು ಮಾರಾಟ ಮಾಡಿದ್ದಾರೆ.

ಅದೇ ಊರಿನ ನಿವಾಸಿ ಮತ್ತು ಮಗು ಮಾರಾಟ ಜಾಲದ ಮಧ್ಯವರ್ತಿಯಾಗಿರುವ ನಾರಾಯಣಸ್ವಾಮಿ ಎಂಬ ವ್ಯಕ್ತಿಗೆ ಶುಕ್ರವಾರ ಎರಡು ಲಕ್ಷ ರುಪಾಯಿಗೆ ಮಗುವನ್ನು ಮಾರಾಟ ಮಾಡಿದ್ದು, ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ಮಂಜುಳ ಮತ್ತು ಕೃಷ್ಣ ಎಂಬ ದಂಪತಿಗೆ ಮಧ್ಯವರ್ತಿ ನಾರಾಯಣಸ್ವಾಮಿ ಐದು ಲಕ್ಷಕ್ಕೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.

ಈ ವಿಚಾರ ತಿಳಿದ ಸ್ಥಳೀಯರೊಬ್ಬರು ಶ್ರೀನಿವಾಸಪುರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಈ ದಂಧೆಯಲ್ಲಿ ಭಾಗಿಯಾಗಿದ್ದ ನೀತು, ರಾಘವೇಂದ್ರ ಮತ್ತು ಮಧ್ಯವರ್ತಿ ಸೇರಿ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

Back to top button
error: Content is protected !!