ಇತರೆ
ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದಕ್ಕೆ ಪೋಕ್ಸೋ ಕೇಸ್; ಸಾವಿಗೆ ಶರಣಾದ ಯುವಕ
Views: 92
ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದಕ್ಕೆ ಪೋಕ್ಸೋ ಕೇಸ್ ದಾಖಲಾದ ಹಿನ್ನೆಲೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರಿನ ದಿಗವಮಾರಪ್ಪಗಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್(19) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮಂಜುನಾಥ್ ಇನ್ಸ್ಟಾಗ್ರಾಮ್ನಲ್ಲಿ ಸಾತನೂರು ಮೂಲದ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದನು. ಬಳಿಕ ಮಂಜುನಾಥ್ 18 ವರ್ಷ ಮತ್ತು ಹುಡುಗಿಗೆ 16 ವರ್ಷ ಆಗಿರುವಾಗ 2025ರಲ್ಲಿ ವಿವಾಹವಾಗಿದ್ದರು.
ಪರಿಶೀಲನೆ ವೇಳೆ ಬಾಲಕಿ 8 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಬಾಲಕಿ ವಯಸ್ಸು ಕಡಿಮೆ ಎಂದು ತಿಳಿದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖಾ ಅಧಿಕಾರಿಗಳು ಆಕೆಯನ್ನು ಬಾಲಕಿಯರ ಬಾಲಮಂದಿರದಲ್ಲಿ ಇರಿಸಿದ್ದಾರೆ.
ಬಳಿಕ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಚೇಳೂರು ಪೊಲೀಸ್ ಠಾಣೆಯಲ್ಲಿ ಪೋಕೋ ಕೇಸ್ ದಾಖಲಿಸಲಾಗಿತ್ತು. ಇದರಿಂದ ತನಗೆ ಏನಾದರೂ ಮಾಡಿದರೆ ಎಂದು ಭಯಗೊಂಡ ಮಂಜುನಾಥ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.






