ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಕಡೆಯಿಂದ ನೀಡುವ ಅತ್ಯುತ್ತಮ ಪೊಲೀಸ್ ಸಲಹೆಗಾರರು ಹಾಗೂ ಪೊಲೀಸ್ ಸ್ನೇಹಿತರು ಪ್ರಶಂಸನಾ ಪುರಸ್ಕಾರವನ್ನು ಮೋಹನ್ ಚಂದ್ರ ಕಾಳಾವರ್ಕರ್ ರವರಿಗೆ ಪ್ರದಾನ ಮಾಡಲಾಯಿತು.
ಗಣರಾಜ್ಯೋತ್ಸವ ದಿನದಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರು ಈ ಪ್ರಶಸ್ತಿಯನ್ನು ಉಡುಪಿ ಜಿಲ್ಲಾ ಕಛೇರಿಯಲ್ಲಿ ಪ್ರದಾನ ಮಾಡಿದರು.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಕಂಡ್ಲೂರು ವ್ಯಾಪ್ತಿಯ ಕಾಳಾವರ ಗ್ರಾಮದ ಬಿ. ಮೋಹನ್ ಚಂದ್ರ ಕಾಳಾವರ್ಕರ್ “ನಮ್ಮ ಪ್ರಗತಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ (ರಿ.) ಕಾಳಾವರ” ಇದರ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ.
ಈ ಪ್ರಶಸ್ತಿಯನ್ನು ಸಮುದಾಯದ ಪೊಲೀಸ್ ವ್ಯವಸ್ಥೆ ಬಲಪಡಿಸುವ ಹಾಗೂ ಇವರ ಸೇವಾಭಾವ, ಪರಿಶ್ರಮ, ಸಹಕಾರ, ಸಲಹೆಗಳನ್ನು ಮೆಚ್ಚಿ ಈ ಪ್ರಶಸ್ತಿ ನೀಡಿ, ಗೌರವಿಸಲಾಯಿತು.