ಗ್ರಾಹಕರಿಗೆ ಸಿಹಿ ಸುದ್ದಿ… ಇನ್ಮುಂದೆ ರಾಜ್ಯದಾದ್ಯಂತ 10 ರೂಪಾಯಿಗೆ ಸಿಗಲಿದೆ ನಂದಿನಿ ಹಾಲು ಮತ್ತು ಮೊಸರು…!
Views: 174
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಹಾಲು ಮಹಾಮಂಡಳಿ (KMF) ಭರ್ಜರಿ ಸಿಹಿಸುದ್ದಿ ನೀಡಿದೆ. ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಮೊಸರು ಇನ್ಮುಂದೆ ಕೇವಲ 10 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಲಿನ ಸಣ್ಣ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಕೆಎಂಎಫ್ ಗ್ರಾಹಕ ಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಈ ನೂತನ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಿದರು.
ಹೊಸ ಪ್ಯಾಕೆಟ್‌ಗಳ ದರ ಮತ್ತು ಪ್ರಮಾಣ ಹೀಗಿದೆ
ಈ ಮೊದಲು ಮಾರುಕಟ್ಟೆಯಲ್ಲಿ ಕನಿಷ್ಠ 200 ML ಹಾಲಿನ ಪ್ಯಾಕೆಟ್‌ಗಳು ಲಭ್ಯವಿದ್ದವು. ಆದರೆ ಈಗ ಗ್ರಾಹಕರ ಅನುಕೂಲಕ್ಕಾಗಿ ಕೆಎಂಎಫ್ ಸಣ್ಣ ಪ್ಯಾಕೆಟ್‌ಗಳನ್ನು ಪರಿಚಯಿಸಿದೆ.
ನಂದಿನಿ ಹಾಲು: 160 ML ಪಾಕೆಟ್‌ಗೆ ಕೇವಲ 10 ರೂಪಾಯಿ.
ನಂದಿನಿ ಮೊಸರು: 140 ML ಪಾಕೆಟ್‌ಗೆ ಕೇವಲ 10 ರೂಪಾಯಿ.
ಲಸ್ಸಿ ಪ್ರಿಯರಿಗೂ ಗುಡ್ ನ್ಯೂಸ್
ಹಾಲು ಮತ್ತು ಮೊಸರಿನ ಜೊತೆಗೆ ನಂದಿನಿ ಲಸ್ಸಿ ಪ್ರಿಯರಿಗೂ ಕೆಎಂಎಫ್ ಸಖತ್ ಆಫರ್ ನೀಡಿದೆ. ಮಾವಿನ ಲಸ್ಸಿ (Mango Lassi) ಮತ್ತು ಸ್ಟ್ರಾಬೆರಿ ಲಸ್ಸಿ (Strawberry Lassi) ಪ್ಯಾಕೆಟ್‌ಗಳು ಕೇವಲ 15 ರೂಪಾಯಿಗೆ ಲಭ್ಯವಾಗಲಿವೆ.
ಶೀಘ್ರದಲ್ಲೇ ಎಲ್ಲಾ ಮಳಿಗೆಗಳಲ್ಲಿ ಲಭ್ಯ
ಈಗಾಗಲೇ ಮುಖ್ಯಮಂತ್ರಿಗಳಿಂದ ಚಾಲನೆ ಸಿಕ್ಕಿದ್ದು, ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ಇರುವ ಎಲ್ಲಾ ನಂದಿನಿ ಪಾರ್ಲರ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ 10 ರೂಪಾಯಿ ಬೆಲೆಯ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳು ಗ್ರಾಹಕರಿಗೆ ಸಿಗಲಿವೆ. ಕಡಿಮೆ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಕೆಎಂಎಫ್ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಈ ಹೊಸ ಪ್ಲ್ಯಾನ್ ರೂಪಿಸಿದೆ.






