ಕರಾವಳಿ

ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಕೈಯ್ಯಲ್ಲಿ ಬಂಗುಡೆ ಮೀನು ಹಿಡಿದು ಸಂಭ್ರಮ

Views: 69

ಕನ್ನಡ ಕರಾವಳಿ ಸುದ್ದಿ:  ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ತವರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು ರಕ್ಷಿತಾ ಶೆಟ್ಟಿಗೆ ತಮ್ಮ ನೆಚ್ಚಿನ ಬಂಗುಡೆ ಮೀನು ಕೊಟ್ಟು ಸ್ವಾಗತಿಸಿದರು.

12ನೇ ಸೀಸನ್ ಬಿಗ್ ಬಾಸ್ ಮನೆಯಲ್ಲಿ ಚಟಪಟ ಮಾತುಗಳ ಮೂಲಕವೇ ಕನ್ನಡಿಗರ ಮನಗೆದ್ದು ಫೈನಲ್ ಪ್ರವೇಶಿಸಿದ್ದ ರಕ್ಷಿತಾ ಶೆಟ್ಟಿ ಅಂತಿಮವಾಗಿ ರನ್ನರ್-ಅಪ್ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದೀಗ ರಕ್ಷಿತಾ ತನ್ನ ತವರೂರಾದ ಉಡುಪಿಗೆ ಎಂಟ್ರಿ ಕೊಟ್ಟಿದ್ದಾರೆ.

ಉಡುಪಿಯ ಹೆಜಮಾಡಿಯಿಂದ ಪಡುಬಿದ್ರೆ ಪೇಟೆಯ ತನಕ ರಕ್ಷಿತಾ ಶೆಟ್ಟಿಯವರನ್ನು ತೆರೆದ ವಾಹನದ ಮೂಲಕ ಅವರ ಅಭಿಮಾನಿಗಳು ಮೆರವಣಿಗೆ ನಡೆಸಿದರು. ರಕ್ಷಿತಾ ಅವರನ್ನು ಶಾಲು ಹಾಕಿ ಅಭಿಮಾನಿಗಳು ಸ್ವಾಗತಿಸಿದರು. ಬಂಗುಡೆ ಮೀನಂದ್ರೆ ರಕ್ಷಿತಾಗೆ ಬಲು ಇಷ್ಟ. ಇದೇ ಕಾರಣಕ್ಕೆ ರಕ್ಷಿತಾಗೆ ಅಭಿಮಾನಿಗಳು ಬಂಗುಡೆ ಮೀನನ್ನು ಗಿಫ್ಟ್ ನೀಡಿದರು. ರಕ್ಷಿತಾ ಕೈಯ್ಯಲ್ಲಿ ಬಂಗುಡೆ ಮೀನು ಹಿಡಿದು ಸಂಭ್ರಮಿಸಿದರು.

ರಕ್ಷಿತಾ ಜತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಜೊತೆ ಸೆಲ್ಪಿ ತೆಗೆದುಕೊಳ್ಳಲು ಸ್ಥಳೀಯರು ಮುಗಿಬಿದ್ದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂರಾರು ಜನ ರಕ್ಷಿತಾ ಅವರನ್ನು ನೋಡಲು ಮುಗಿಬಿದ್ದರು.

Related Articles

Back to top button
error: Content is protected !!