ಶಿಕ್ಷಣ

ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಕೈಗಾರಿಕಾ ಕೇಂದ್ರಕ್ಕೆ ಭೇಟಿ

Views: 153

ಕನ್ನಡ ಕರಾವಳಿ ಸುದ್ದಿ:  ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಕೋಟೇಶ್ವರದ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಅಂತಿಮ ಬಿ.ಕಾಂ 50 ವಿದ್ಯಾರ್ಥಿಗಳಿಗೆ ವಿವಿಧ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅದರ ಸೂಕ್ಷ್ಮ ಅಧ್ಯಯನವನ್ನು ಮಾಡಲಾಯಿತು.

ಮಣಿಪಾಲದ ಉದಯವಾಣಿ ಮುದ್ರಣಾಲಯ ಮುಖ್ಯಸ್ಥರು ವಿದ್ಯಾರ್ಥಿಗಳ ಈ ಭೇಟಿಯಿಂದ ನೈಜ ಅಧ್ಯಯನ ಹಾಗೂ ಸಮಾಜಮುಖಿಗಳಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಉದಯ ಅಲ್ಯುಮೀನಿಯಂ ಘಟಕ ಮಣಿಪಾಲದ ವ್ಯವಸ್ಥಾಪಕರಾದ ಹೇಮಂತ್ ಕುಮಾರ್ ರವರು ಅಲ್ಯುಮೀನಿಯಂ ಹಾಗೂ ಸ್ಟೀಲ್‌ನ ವಿವಿಧ ಪರಿಕರಗಳ ಉತ್ಪಾದನಾ ಹಂತಗಳನ್ನು ಸ್ಥೂಲವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಉಪ್ಪೂರಿನಲ್ಲಿರುವ ಕೆ.ಎಂ.ಎಫ್.ನ ಹಾಲಿನ ಸಂಸ್ಕರಣ ಘಟಕದಲ್ಲಿ ಅಲ್ಲಿಯ ಸಿಬ್ಬಂದಿಯವರು ಹಾಲು ಹಾಗೂ ಅದರ ಸಹ – ಉತ್ಪನ್ನಗಳ ಸಂಸ್ಕರಣೆಯ ವಿವಿಧ ಮಜಲುಗಳನ್ನು ವಿವರವಾಗಿ ತಿಳಿಸಿದರು.

ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಶೇಖರ ಬಿ. ಹಾಗೂ ಉಪನ್ಯಾಸಕರಾದ ಶೃತಿ ಆಚಾರ್ಯ ಎನ್. ಹಾಗೂ ಚೈತ್ರಾ ಹೆಚ್. ಇವರು ಈ ಭೇಟಿಯ ನೇತೃತ್ವ ವಹಿಸಿದರು.

Related Articles

Back to top button
error: Content is protected !!