ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್: ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಯುವ ದಿನಾಚರಣೆ
Views: 505
ಕನ್ನಡ ಕರಾವಳಿ ಸುದ್ದಿ: ಗುರುಕುಲದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಜ.12 ರಂದು ರಂದು ವಕ್ವಾಡಿಯ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಜಂಟಿಯಾಗಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಿದರು.
ಭಾರತೀಯರ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರವರ ಉದಾತ್ತ ಮನೋಭಾವ ಮತ್ತು ದೇಶ ಕಟ್ಟುವುದಕ್ಕೆ ಯುವ ಶಕ್ತಿಯ ದೃಢ ಸಂಕಲ್ಪದಅಗತ್ಯತೆಯನ್ನು ಜನತೆ ಸಾರಿದ ಬಗೆಯನ್ನು ಪ್ರಾಂಶುಪಾಲರಾದ ಡಾ. ರೂಪ ಶಣೈ ರವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ವಿದ್ಯಾರ್ಥಿಗಳಾದ ಸುಶ್ಮಿತಾ, ಕೋಟೇಶ್, ಕೃತಿಕಾ, ಕುಶಿ, ಅಕ್ಷರಾ, ಅನ್ವಯ್, ದೀಕ್ಷಿತ್ ಹಾಗೂ ಜೀವನ್ ಸ್ವಾಮಿ ವಿವೇಕಾನಂದರ ಕುರಿತಾಗಿ ಮಾತಾಡಿದರು. ವಿದ್ಯಾರ್ಥಿ ಪ್ರೀತಮ್ ಮಯ್ಯ ಸ್ವಾಮಿ ವಿವೇಕಾನಂದರ ವೇಷ ಭೂಷಣ ತೊಟ್ಟು ಚೀಕಾಗೋ ಭಾಷಣದ ಸಂದೇಶ ತಿಳಿದರು. ವಿದ್ಯಾರ್ಥಿ ಪ್ರಥಮ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






