ರಾಜಕೀಯ

‘ಅಧಿಕಾರ, ಹುದ್ದೆಗಿಂತ ಕಾರ್ಯಕರ್ತನಾಗಿರುವೆ’ ದೆಹಲಿಯಿಂದಲೇ ಹೈಕಮಾಂಡ್‌ಗೆ ಸಂದೇಶ ರವಾನಿಸಿದ ಡಿಕೆಶಿ 

Views: 44

ಕನ್ನಡ ಕರಾವಳಿ ಸುದ್ದಿ: ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿ ರುವ ಹಗ್ಗ-ಜಗ್ಗಾಟದ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಕುರ್ಚಿ’ ಕುರಿತು ವೈರಾಗ್ಯ ಮಾತಾಡಿರುವುದು ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣ ವಾಗಿದ್ದು, ಡಿಕೆಶಿ ಅವರ ಹೇಳಿಕೆ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸುವ ಮೊದಲು ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ, ‘ಹುದ್ದೆಗಿಂತ ಕಾರ್ಯಕರ್ತನಾಗಿರಲು ಬಯಸುತ್ತೇನೆ’ ಎನ್ನುವ ಮೂಲಕ ಯಾವ ಸಂದೇಶ ನೀಡುವ ಪ್ರಯತ್ನಿಸಿದ್ದಾರೆ ಎನ್ನುವ ಪ್ರಶ್ನೆಗಳು ಶುರುವಾಗಿದೆ. ಅದರ ಲ್ಲಿಯೂ ಬಿಹಾರ ಚುನಾವಣಾ ಫಲಿತಾಂಶದ ಬಳಿಕ ರಾಹುಲ್ ಗಾಂಧಿ ಭೇಟಿಗೆ ನಿರಂತರ ಪ್ರಯತ್ನಿಸಿದರೂ ‘ಚುಟುಕು ಭೇಟಿ’ಗಷ್ಟೇ ಅವಕಾಶ ಸಿಕ್ಕಿರುವುದರಿಂದ ಈ ಹೇಳಿಕೆಯ ಮೂಲಕ ಹೈಕಮಾಂಡ್‌ಗೆ ದೆಹಲಿಯಿಂದಲೇ ಯಾವ ಸಂದೇಶ ರವಾನಿಸುವ ಪ್ರಯತ್ನಿಸಿದ್ದಾರೆ ಎನ್ನುವ ಪ್ರಶ್ನೆಗಳು ಪಕ್ಷದಲ್ಲಿ ಶುರುವಾಗಿದೆ.

ಬುಧವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿ ಯಲ್ಲಿ ಐದು ವರ್ಷ ಉಪ ಮುಖ್ಯಮಂತ್ರಿಯಾಗಿರಲು ಬಯಸುವಿರಾ ಎನ್ನುವ ಪ್ರಶ್ನೆಗೆ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ. ನನಗೆ ಅದೇ ಶಾಶ್ವತ. ಹೈಕಮಾಂಡ್ ನಾಯಕರು ತಮಗೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಮುಕ್ತ ಅವಕಾಶಗಳನ್ನು ನೀಡಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ. ನನಗೆ ಐದು ವರ್ಷ ಉಪ ಮುಖ್ಯಮಂತ್ರಿ ಯಾಗಿರಬೇಕು ಎಂಬ ಇರಾದೆ ಇಲ್ಲ. 1980 ರಿಂದಲೂ ಪಕ್ಷದ ಕಾರ್ಯಕರ್ತನಾಗಿದ್ದೇನೆ. ಅದು ನನ್ನ ಶಾಶ್ವತ ಹುದ್ದೆ. ಸಾಮಾನ್ಯ ಕಾರ್ಯಕರ್ತನಾಗಿ ಇರುವುದು ಹೆಚ್ಚು ಖುಷಿ ನೀಡಲಿದೆ ಎಂದು ಹೇಳಿದ್ದಾರೆ.

ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದ ನಡೆದಿದೆಯೇ ಎನ್ನುವ ಪ್ರಶ್ನೆಗೆ, ನಮ್ಮ ನಡುವೆ ಏನೆಲ್ಲಾ ಚರ್ಚೆಯಾಗಿತ್ತು ಎಂದು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾವು ಒಟ್ಟಾಗಿ ಸೇರಿ ಕೆಲಸ ಮಾಡಿ, ಸರಕಾರ ವನ್ನು ರಚಿಸಿದ್ದೇವೆ. ಪ್ರತಿ ಕಾರ್ಯಕರ್ತರು ಪಕ್ಷಕ್ಕಾಗಿ ತಮ್ಮ ಬೇವರು ಹರಿಸಿ ದುಡಿದಿದ್ದಾರೆ. ನಮಗೆ ಸ್ಪಷ್ಟ ಬಹುಮತ ನೀಡಿದ ರಾಜ್ಯದ ಜನರಿಗೆ ನಾವು ಚಿರಋಣಿಯಾಗಿರುತ್ತೇವೆ ಎಂದರು.

Related Articles

Back to top button