ಸಾಂಸ್ಕೃತಿಕ

ಈ ಪ್ರದೇಶದಲ್ಲಿ ಮಹಿಳೆಯರಿಗೆ ಕ್ಯಾಮೆರಾ ಇರುವ ಫೋನ್‌ ಬಳಕೆ ನಿಷೇಧ; ಇದೇನಿದು ಹೊಸ ರೂಲ್ಸ್‌?

Views: 94

ಕನ್ನಡ ಕರಾವಳಿ ಸುದ್ದಿ: ಮಹಿಳೆಯರಿಗೆ ಕ್ಯಾಮರಾ ಇರುವ ಫೋನ್ ಬಳಸುವಂತಿಲ್ಲ ಎಂದು ರಾಜಸ್ಥಾನದ ಜಾಲೋರ್ ಜಿಲ್ಲೆಯ ಗ್ರಾಮ ಪಂಚಾಯತ್‍ನಲ್ಲಿ ಈ ವಿಚಿತ್ರ ನಿಯಮವನ್ನು ಜಾರಿಗೆ ತಂದಿದೆ. ಜನವರಿ 26 ರಿಂದ 15 ಹಳ್ಳಿಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ. ಸ್ಮಾರ್ಟ್‌ಫೋನ್‌ಗಳ ಬದಲಿಗೆ ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಲು ಅನುಮತಿಸಲಾಗುವುದು.

ಜೋಧಪುರ: ಸೊಸೆಯಂದಿರು ಹಾಗೂ ಯುವತಿಯರು ಕ್ಯಾಮೆರಾ ಹೊಂದಿರುವ ಫೋನ್‍ಗಳನ್ನು ಬಳಸದಂತೆ ನಿಷೇಧಿಸಲಾಗಿದೆ. ಈ ವಿಚಿತ್ರ ನಿಯಮವನ್ನು ರಾಜಸ್ಥಾನದ ಜಾಲೋರ್ ಜಿಲ್ಲೆಯ ಗ್ರಾಮ ಪಂಚಾಯತ್ ಹೊರಡಿಸಿದೆ. ಜನವರಿ 26 ರಿಂದ 15 ಹಳ್ಳಿಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ. ಅಲ್ಲದೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಥವಾ ನೆರೆಹೊರೆಯವರ ಮನೆಗೆ ಫೋನ್  ತೆಗೆದುಕೊಂಡು ಹೋಗುವುದನ್ನು ಸಹ ನಿಷೇಧಿಸಲಾಗುವುದು. ಸ್ಮಾರ್ಟ್‌ಫೋನ್‌ಗಳ ಬದಲಿಗೆ ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಲು ಅನುಮತಿಸಲಾಗುವುದು.

14 ಉಪವಿಭಾಗಗಳ ಅಧ್ಯಕ್ಷ ಸುಜ್ನಾರಾಮ್ ಚೌಧರಿ ಅಧ್ಯಕ್ಷತೆಯಲ್ಲಿ ಜಲೋರ್ ಜಿಲ್ಲೆಯ ಗಾಜಿಪುರ ಗ್ರಾಮದಲ್ಲಿ ಭಾನುವಾರ ನಡೆದ ಚೌಧರಿ ಸಮುದಾಯದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಂಚ ಹಿಮ್ತಾರಾಮ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಚೌಧರಿ ಹೇಳಿದರು.

ಹಿಮ್ಮತಾರಾಮ್ ಅವರ ಪ್ರಕಾರ, ಪಂಚ ಸದಸ್ಯರು ಮತ್ತು ಸಮುದಾಯದ ಸದಸ್ಯರ ನಡುವಿನ ಚರ್ಚೆಯ ನಂತರ, ಸೊಸೆಯಂದಿರು ಮತ್ತು ಯುವತಿಯರು ಕರೆ ಮಾಡಲು ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಬೇಕೆಂದು ನಿರ್ಧರಿಸಲಾಯಿತು.

ಶಾಲಾ ಬಾಲಕಿಯರು ತಮ್ಮ ಅಧ್ಯಯನಕ್ಕಾಗಿ ಮೊಬೈಲ್ ಫೋನ್‌ಗಳ ಅಗತ್ಯವಿರುವಾಗ ಅವುಗಳನ್ನು ಮನೆಯಲ್ಲಿ ಮಾತ್ರ ಬಳಸಬಹುದು. ಮದುವೆಗಳು, ಸಾಮಾಜಿಕ ಕಾರ್ಯಕ್ರಮಗಳು ಅಥವಾ ನೆರೆಹೊರೆಯವರ ಮನೆಗೆ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಹೋಗಲು ಅವರಿಗೆ ಅವಕಾಶವಿಲ್ಲ ಎಂದು ಚೌಧರಿ ವಿವರಿಸಿದರು.

 

Related Articles

Back to top button