ಇತರೆ
ಬಾರಕೂರು ರೆಸಾರ್ಟ್‌ನಲ್ಲಿ ಯಾವುದೇ ದಾಖಲೆಗಳಿಲ್ಲದೆ ವಾಸವಿದ್ದ 9 ಮಂದಿ ವಿದೇಶಿಗರು ಪತ್ತೆ
Views: 69
ಕನ್ನಡ ಕರಾವಳಿ ಸುದ್ದಿ: ಬಾರಕೂರು ಹನೆಹಳ್ಳಿ ಗ್ರಾಮದ ರೆಸಾರ್ಟ್‌ನಲ್ಲಿ ಯಾವುದೇ ದಾಖಲೆಗಳಿಲ್ಲದ 9 ಮಂದಿ ವಿದೇಶಿಗರು ಪತ್ತೆಯಾಗಿದ್ದಾರೆ.
ವಿದೇಶಿ ಮಹಿಳೆಯೋರ್ವಳು ಬಾರಕೂರಿನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದು ಆಗ ವೈದ್ಯರು ದಾಖಲೆಗಳನ್ನು ಕೇಳಿದಾಗ ಯಾವುದೇ ದಾಖಲೆ ಇಲ್ಲವೆಂದು ತಿಳಿಸಿದ್ದರು.ಈ ಕುರಿತು ಆಸ್ಪತ್ರೆಯವರು ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಪೊಲೀಸ್ ಉಪನಿರೀಕ್ಷಕರು ಭೇಟಿ ನೀಡಿದಾಗ ರೆಸಾರ್ಟ್‌ನಲ್ಲಿ ರೀಪಕ್ ದಮಾಯಿ, ಸುನಿತ ದಮಾಯಿ, ಉರ್ಮಿಳ, ಕೈಲಾಶ್ ದಮಾಯಿ, ಕಪಿಲ್ ದಮಾಯಿ, ಸುನಿತ ದಮಾಯಿ ಹಾಗೂ ಮೂವರು ಚಿಕ್ಕ ಮಕ್ಕಳು ಅಕ್ರಮವಾಗಿ ನೆಲೆಸಿರುವುದು ಕಂಡುಬಂದಿದೆ.
ಅವರು ಗುರುತುಪತ್ರ, ಜನ್ಮದಿನಾಂಕ ದಾಖಲೆ, ಮಾನ್ಯವಾದ ಪಾಸ್‌ಪೋರ್ಟ್, ವೀಸಾ, ಪ್ರಯಾಣ ದಾಖಲೆ ಸಹಿತ ಯಾವುದೇ ದಾಖಲೆಪತ್ರಗಳಿಲ್ಲದೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






