ಇತರೆ

ಕಾರವಾರಕ್ಕೆ ವಲಸೆ ಬಂದ ಜಿಪಿಎಸ್ ಟ್ರ್ಯಾಕರ್ ಹೊಂದಿದ ಸೀಗಲ್ ಹಕ್ಕಿ ಸಾವು

Views: 53

ಕನ್ನಡ ಕರಾವಳಿ ಸುದ್ದಿ:  ಉತ್ತರ ಕನ್ನಡ ಜಿಲ್ಲೆ ಕಾರವಾರಕ್ಕೆ ವಲಸೆ ಬಂದ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿದೆ. ಅದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಸೀಗಲ್ ಹಕ್ಕಿ ಗುರುವಾರ ರಾತ್ರಿ ಮೃತಪಟ್ಟಿದೆ.

ಗಂಭೀರವಾಗಿ ಗಾಯಗೊಂಡಿದ್ದ ಪಕ್ಷಿಗೆ ದಾಂಡೇಲಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗಾಯದ ಪರಿಣಾಮ ಆಹಾರವನ್ನೂ ಸೇವಿಸುತ್ತಿರಲಿಲ್ಲ. ಗಂಭೀರ ಗಾಯ ಹಾಗೂ ಆಹಾರ ಸೇವನೆ ಬಿಟ್ಟ ಕಾರಣ ಹಕ್ಕಿ ಮೃತಪಟ್ಟಿದೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಮಂಜು ಹೆಪ್ಪುಗಟ್ಟಿದ ಪ್ರದೇಶದಿಂದ ಚಳಿಗಾಲದಲ್ಲಿ ಉಷ್ಣ ವಲಯದ ಶ್ರೀಲಂಕಾ ಹಾಗೂ ಭಾರತದ ಕರಾವಳಿಗೆ ಹೂಗ್ರಿನ್ ಸೀಗಲ್ ವಲಸೆ ಬರುತ್ತವೆ. ಹೀಗೆ ಬಂದ ಪಕ್ಷಿ ಯನ್ನು ಶ್ರೀಲಂಕಾ ಪಕ್ಷಿ ಸಂಶೋಧನ ಸಂಸ್ಥೆಯೊಂದು ಸೆರೆಹಿಡಿದು ಹಕ್ಕಿಯ ಚಲನವಲನ ಸಂಶೋಧನೆಗಾಗಿ ಕಳೆದ ಮಾರ್ಚ್‌ನಲ್ಲಿ ಉಪಗ್ರಹ ಆಧಾರಿತ ಟ್ಯಾಗಿಂಗ್ ಪರಿಕರ ಅಳವಡಿಸಿತ್ತು. ಅನಂತರ ಸೈಬೀರಿಯಾದತ್ತ ಪ್ರಯಾಣಿಸಿದ್ದ ಸೀಗಲ್ ಹಕ್ಕಿ ಆರ್ಕ್‌ಟಿಕ್‌ವರೆಗೆ ಸಾಗಿ ಅಲ್ಲಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿ ಪುನಃ ಶ್ರೀಲಂಕಾದತ್ತ ಪ್ರಯಾಣಿಸುತ್ತಿತ್ತು.ಮಾರ್ಗ ಮಧ್ಯೆ ಗಾಯಗೊಂಡ ಕಾರಣ ಕಾರವಾರದ ಬೀಚ್‌ನಲ್ಲಿ ಹಾರಾಟ ಸ್ಥಗಿತಗೊಂಡಿತ್ತು ಎಂದು ಕೊಲಂಬೋದ ಸಂಸ್ಥೆ ತಿಳಿಸಿದೆ.

Related Articles

Back to top button