ಶಿಕ್ಷಣ
ಕುಡಿದು ತೂರಾಡುತ್ತಾ ಶಾಲೆಗೆ ಬಂದ ಮುಖ್ಯ ಶಿಕ್ಷಕ: ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
Views: 38
ಕನ್ನಡ ಕರಾವಳಿ ಸುದ್ದಿ: ಮುಖ್ಯೋಪಾಧ್ಯಾಯನೊಬ್ಬ ಮದ್ಯಪಾನ ಮಾಡಿ ಶಾಲೆಗೆ ಬಂದಿದ್ದಲ್ಲದೇ ಫೋನ್ ನಲ್ಲಿಯೇ ಬಿಸಿಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬಾಳದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕಂಠಪೂರ್ತಿ ಕುಡಿದು ತೂರಾಡುತ್ತಾ ಶಾಲೆಗೆ ಬರುತ್ತಿದ್ದ, ಹಲವು ಬಾರಿ ಗ್ರಾಮಸ್ಥರು ಕುಡಿದು ಶಾಲೆಗೆ ಬರಬೇಡಿ ಎಂದು ಬೈದು ಬುದ್ದಿ ಹೇಳಿದರೂ ಕೇಳದೇ ಉಡಾಫೆ ಮೆರೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೇ ಶಿಕ್ಷಕನ ಅವತಾರವನ್ನು ವಿಡಿಯೋ ಮಾಡಿ ದೂರು ನೀಡಿದ್ದಾರೆ. ಮುಖ್ಯ ಶಿಕ್ಷಕ ಸ್ಕುಡಿದ ಮತ್ತಿನಲ್ಲಿ ಶಾಲೆಗೆ ಬಂದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.






