ಕುಂಭಾಶಿ :10 ದಿನಗಳ ಆರಿ ಎಂಬ್ರಾಯ್ಡರಿ ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭ
Views: 115
ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ.), ಮಂಗಳೂರು ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸ್ಪೂರ್ತಿ ಸಂಜೀವಿನಿ ಒಕ್ಕೂಟ ಕುಂಭಾಶಿ ಪಂಚಾಯತ್ ಇವರ ಆಯೋಜನೆಯಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 10 ದಿನಗಳ ಕಾಲ ನಡೆದ ಆರಿ ಎಂಬ್ರಾಯ್ಡರಿ ತರಬೇತಿಯ ಸಮಾರೋಪ ಸಮಾರಂಭ ನೆರವೇರಿತು.
ತರಬೇತಿಯ ಬಗ್ಗೆ ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ಸ್ವ ಉದ್ಯಮ ಮಾಡಿ ಬದುಕು ಕಟ್ಟಿಕೊಳ್ಳಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬಿವಿಟಿಯಿಂದ ವಿದ್ಯಾ ಶಾಸ್ತ್ರಿ, ಹೇಮಾ ರಂಗನಾಥ್ ನ್, ರಾಘವೇಂದ್ರ ಆಚಾರ್ಯ ಕೆದೂರು, ಪಂಚಾಯತ್ ಅಧ್ಯಕ್ಷರು ಆನಂದ ಪೂಜಾರಿ, ಪಂಚಾಯತ್ ಪಿಡಿಓ ಗಣೇಶ್ , ಎನ್ ಆರ್ ಎಲ್ ಎಂ ತಾಲೂಕು ವಲಯ ಮೇಲ್ವಿಚಾರಕಿ ಮಮತಾ, ಸ್ಪೂರ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಸುನೀತಾ, ಚಿತ್ತಾರ ತಾಲೂಕು ಒಕ್ಕೂಟದ ಕಾರ್ಯದರ್ಶಿ ನಾಗರತ್ನ ತರಬೇತುದಾರೆ ನಿಶ್ಮಿತಾ ತೆಕ್ಕಟ್ಟೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಿಬಿರಾರ್ಥಿಗಳ ಪರವಾಗಿ ದಿವ್ಯಾ, ಗೀತಾ, ಭಾಗ್ಯಶ್ರೀ, ಶೋಭಾ, ದೀಪಿಕಾ, ಶಾಂತಾ ಅನಿಸಿಕೆ ಹಂಚಿಕೊಂಡರು .
ಶಿಬಿರಾರ್ಥಿಗಳಾದ ಶ್ಯಾಮಲ ಸಾವಿತ್ರಿ ವೃಂದಾ, ದೀಪಾ, ಶ್ರೀ ಲಕ್ಷ್ಮೀ, ದೀಪಾ ಕೃಷ್ಣ ಪ್ರಾರ್ಥಿಸಿ, ಪಶುಸಖಿ ಪಾರ್ವತಿ ಸ್ವಾಗತಿಸಿ, ಎಂಬಿಕೆ ರೂಪಿಣಿ ನಿರೂಪಿಸಿ ವಂದಿಸಿದರು. ಎಲ್ ಸಿ ಆರ್ ಪಿ ಜಯ, ಜಯಲಕ್ಷ್ಮಿ, ಸುಚಿತ್ರ, ಕೃಷಿಸಖಿ ಸುಪ್ರೀತಾ ಮತ್ತು ಒಕ್ಕೂಟದ ಉಪಾಧ್ಯಕ್ಷೆ ರತ್ನ,ಪದಾಧಿಕಾರಿಗಳು ಮತ್ತು ವಿಜಯ ಗ್ರಾಮೀಣ ಪ್ರತಿಷ್ಠಾನ ದ ಸಿಬ್ಬಂದಿ ಪಂಡರಿನಾಥ್ ಸಹಕರಿಸಿದರು. 30 ಮಂದಿ ಫಲಾನುಭವಿಗಳು ಪಾಲ್ಗೊಂಡಿದ್ದು ಪ್ರಮಾಣ ಪತ್ರ ನೀಡಲಾಯಿತು.






