ಇತರೆ
ಬಿಜೆಪಿ ಕಾರ್ಯಕರ್ತನ ಮನೆ ಎದುರು ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಪಕ್ಷದ ಕಾರ್ಯಕರ್ತೆ
Views: 36
ಕನ್ನಡ ಕರಾವಳಿ ಸುದ್ದಿ: ಬಿಜೆಪಿಯ ದಕ್ಷಿಣ ಮಂಡಲದಲ್ಲಿ ಸಕ್ರಿಯವಾಗಿದ್ದ ಪಕ್ಷದ ಕಾರ್ಯಕರ್ತೆ ಬ್ರಹ್ಮಪುರ ಬಡಾವಣೆ ನಿವಾಸಿ ಜ್ಯೋತಿ ಪಾಟೀಲ (35) ಅವರು ಪಕ್ಷದ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮಲ್ಲಿನಾಥ ಬಿರಾದಾರ ಅವರ ನಂದಿಕೂರ ಗ್ರಾಮದ ಮನೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಮಲ್ಲಿನಾಥ ಬಿರಾದಾರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಜೆಪಿ ಮಹಿಳಾ ಘಟಕದಲ್ಲಿದ್ದ ಜ್ಯೋತಿ ಪಾಟೀಲ ಮಲ್ಲಿನಾಥ ಮನೆಗೆ ತೆರಳಿದ್ದರು. ಈ ವೇಳೆ ಮಲ್ಲಿನಾಥ ಮನೆಯಲ್ಲಿರಲಿಲ್ಲ. ಅವರ ಹೆಂಡತಿ ಮತ್ತು ಮೂವರು ಮಕ್ಕಳು ಮನೆಯಲ್ಲಿದ್ದರು. ಮನೆಯ ಬಾಗಿಲು ತೆರೆಯುತ್ತಲೇ ಮಲ್ಲಿನಾಥ ಬಗ್ಗೆ ವಿಚಾರಿಸಿದ್ದಾರೆ. ಉತ್ತರ ನೀಡುವ ಮುನ್ನವೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.






