ಸಾಂಸ್ಕೃತಿಕ
ಕಿರುತೆರೆ ನಟಿ ಚೈತ್ರಾರನ್ನು ಪತಿಯಿಂದಲೇ ಕಿಡ್ನಾಪ್
Views: 142
ಕನ್ನಡ ಕರಾವಳಿ ಸುದ್ದಿ: ಕಿರುತೆರೆ ನಟಿ ಮತ್ತು ಸಿನಿಮಾ ನಟಿ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಕಲಾವಿದೆ ತನ್ನ ಪತಿಯಿಂದಲೇ ಕಿಡ್ನಾಪ್ ಆಗಿದ್ದಾರೆ.
ನಟಿ ಚೈತ್ರಾರನ್ನು ಅವರ ಪತಿ ಹಾಗೂ ಸಿನಿಮಾ ನಿರ್ಮಾಪಕ ಹರ್ಷವರ್ಧನ್ ಅಪಹರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ನಿನ್ನಲೇನೋ ಹೇಳಬೇಕು ಎಂಬ ಸಿನಿಮಾ ನಿರ್ಮಾಪಕ ಹರ್ಷವರ್ಧನ್, ಮಗಳಿಗಾಗಿ ಪತ್ನಿಯನ್ನೇ ಕಿಡ್ನಾಪ್ ಮಾಡಿದ್ದಾರೆಂದು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2023ರಲ್ಲಿ ನಟಿ ಚೈತ್ರಾ, ನಿರ್ಮಾಪಕ ಹರ್ಷವರ್ಧನ್ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಂದು ವರ್ಷದ ಮಗುವಿದೆ.
ಬಳಿಕ ಅದೇನಾಯ್ತ ಇಬ್ಬರು ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ್ದರು. ಆದರೆ, ಹರ್ಷವರ್ಧನ್ ಗೆ ಮಗುವನ್ನು ಬಿಟ್ಟಿರಲಾಗಿಲ್ಲ. ಹೀಗಾಗಿ, ಪತ್ನಿಯನ್ನು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ.






