ಕರಾವಳಿ
ಗಂಗೊಳ್ಳಿ: ಬೋಟ್ ಕಲ್ಲಿಗೆ ಡಿಕ್ಕಿ ಹೊಡೆದು ಲಕ್ಷಾಂತರ ರೂ. ಹಾನಿ
Views: 67
ಕನ್ನಡ ಕರಾವಳಿ ಸುದ್ದಿ: ಗಂಗೊಳ್ಳಿ ಬಂದರಿನಿಂದ ಸುಮಾರು 20 ಕಿ.ಮೀ. ದೂರದಲ್ಲಿ ಬೋಟ್ ಕಲ್ಲಿಗೆ ಡಿಕ್ಕಿ ಹೊಡೆದು ಲಕ್ಷಾಂತರ ರೂಪಾಯಿ ಹಾನಿಗೊಂಡ ಘಟನೆ ನಡೆದಿದೆ.
ಗುಜ್ಜಾಡಿ ದಯಾಕರ ಮೇಸ್ತ ಮಾಲೀಕತ್ವದ ಜಾಹ್ನವಿ ಹೆಸರಿನ 370 ಬೋಟ್ ಬೋಟ್ ಜಖಂಗೊಂಡಿದ್ದು, ಸಮುದ್ರದ ನೀರು ಒಳಗೆ ನುಗ್ಗಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಆರು ಮೀನುಗಾರರನ್ನು ಇತರೆ ಬೋಟ್‌ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ.ಬೋಟನಲ್ಲಿದ್ದ ಬಲೆ, ಎಂಜಿನ್ ಹಾನಿಗೀಡಾದ ಬೋಟ್ ಮತ್ತಿತರ ಸಲಕರಣೆಗಳು ಸಮುದ್ರ ಪಾಲಾಗಿದ್ದು, ಬೋಟ್ ಸಂಪೂರ್ಣ ಜಖಂಗೊಂಡಿದೆ. 45 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.






