ಮಾಹಿತಿ ತಂತ್ರಜ್ಞಾನ

ಬ್ರಹ್ಮಾವರದಲ್ಲಿ ಆನ್‌ಲೈನ್‌ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಯುವತಿಗೆ ಲಕ್ಷಾಂತರ ರೂ. ವಂಚನೆ 

Views: 155

ಕನ್ನಡ ಕರಾವಳಿ ಸುದ್ದಿ: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಿನಕೋಟೆಯ ನಡುಹಿತ್ತು ನಿವಾಸಿ ಶ್ರೇಯಾ(21) ಎಂಬವರಿಗೆ ನ.24ರಂದು ಟೆಲಿಗ್ರಾಂ ಖಾತೆಗೆ ಅಪರಿಚಿತ ವ್ಯಕ್ತಿಯೊಬ್ಬ ಲಿಂಕ್ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಅದರಂತೆ ಶ್ರೇಯಾ ತನ್ನ ಖಾತೆಯಿಂದ ಆರೋಪಿ ತಿಳಿಸಿದ ಖಾತೆಗೆ ಒಟ್ಟು 1,05,000ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಆರೋಪಿ ಶ್ರೇಯಾ ಅವರಿಗೆ ಹಣ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

Related Articles

Back to top button
error: Content is protected !!