ಇತರೆ

ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ತಂದೆ-ಮಗನ ಮೇಲೆ ಲಾರಿ ಹರಿದು: ಇಬ್ಬರೂ ಸ್ಥಳದಲ್ಲೇ ಸಾವು

Views: 48

ಕನ್ನಡ ಕರಾವಳಿ ಸುದ್ದಿ: ಮೊಬೈಲ್ ನಲ್ಲಿ ಮಾತನಾಡುತ್ತ ರಸ್ತೆ ಬದಿ ನಿಂತಿದ್ದ ತಂದೆ ಹಾಗೂ ಮಗನಿಗೆ ಡಿಕ್ಕಿ ಹೊಡೆದ ಲಾರಿ, ಅವರ ಮೇಲೆಯೇ ಹರಿದು ಹೋಗಿರುವ ಘೋರ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರಿನ ಹೊರವಲಯದಲ್ಲಿ ಈ ಘಟನೆ ನಡೆದಿದೆ. ತಂದೆ ಹಾಗೂ ಮಗ ರಸ್ತೆ ಬದಿ ಮೊಬೈಲ್ ನಲ್ಲಿ ಮಾತನಾಡುತ್ತ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಅವರ ಮೆಲೆ ಹರಿದು ಹೋಗಿದೆ. ಅಪಘಾತದ ರಭಸಕ್ಕೆ ತಂದೆ-ಮಗನ ದೇಹ ಛಿದ್ರ ಛಿದ್ರವಾಗಿ ಬಿದ್ದಿದೆ.

ತಂದೆ ನಾಗಪ್ಪ ಹಾಗೂ ಮಗ ರಮೇಶ್ (38) ಮೃತರು. ರಾಯಚೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button
error: Content is protected !!