ಇತರೆ

ಮನೆ ಮಾಲೀಕನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಮಾಲೀಕ ಸೇರಿ ಸಾಥ್ ನೀಡಿದ ಮಹಿಳೆ ಅರೆಸ್ಟ್ 

Views: 130

ಕನ್ನಡ ಕರಾವಳಿ ಸುದ್ದಿ: ಬಾಡಿಗೆಗೆ ವಾಸವಾಗಿದ್ದ ದಂಪತಿಯ ಅಪ್ರಾಪ್ತ ಮಗಳ ಮೇಲೆ ಮಾಲೀಕನೇ ಅತ್ಯಾಚಾರವೆಸಗಿರುವ  ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ನಡೆದಿದೆ.

ಮಗಳಿಗೆ ಹುಷಾರಿಲ್ಲ ಅಂತ ಪೋಷಕರು ಪಕ್ಕದ ಮನೆಯಲ್ಲಿದ್ದ ಮಹಿಳೆಯೊಬ್ಬರ ಮನೆಯಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದಾರೆ. ಈ ವೇಳೆ ಮನೆ ಮಾಲೀಕ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡ ಮಾಲೀಕ ಚಂದ್ರಶೇಖರ, ಅಪ್ರಾಪ್ತಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ಘಟನೆ ನಂತರ ಬಾಲಕಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯಕೀಯ ಪರೀಕ್ಷೆಯಲ್ಲಿ ದೌರ್ಜನ್ಯದ ಸತ್ಯ ಬೆಳಕಿಗೆ ಬಂದಿದ್ದು, ತಕ್ಷಣವೇ ಪೋಷಕರು ದೂರು ನೀಡಿದ್ದಾರೆ.

ಪೊಲೀಸರು ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಮಾಲೀಕ ಚಂದ್ರಶೇಖರ ಮತ್ತು ಸಹಕಾರ ನೀಡಿದ ಮಹಿಳೆ ಮಂಜೂರಾಳನ್ನು ಬಂಧಿಸಿದ್ದು, ಪೋಕ್ಸೋ ಮತ್ತು ಎಸ್ಸಿ-ಎಸ್ಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related Articles

Back to top button
error: Content is protected !!