ಅಕ್ಕನಿಗೆ ಹುಷಾರಿಲ್ಲ ಅಂತ ಆರೈಕೆಗೆ ಹೋದ ನಾದಿನಿ ಬಾವನ ನೋಟಕ್ಕೆ ಕ್ಲೀನ್ ಬೋಲ್ಡ್ ಆಗಿ ಮದುವೆಯಾದಳು!
Views: 300
ಕನ್ನಡ ಕರಾವಳಿ ಸುದ್ದಿ: ಅಕ್ಕನಿಗೆ ಹುಷಾರಿರಲಿಲ್ಲ ಅಂತ ತಂಗಿ, ಅಕ್ಕನ ಮನೆಗೆ ಹೋಗಿ ಬರ್ತಿದ್ಲು. ಅಕ್ಕನನ್ನು ನೋಡೋ ಬದಲು ಭಾವನನ್ನು ನೋಡಿದ್ದಾಳೆ. 55 ವರ್ಷದ ಬಾವನ ನೋಟಕ್ಕೆ ಕ್ಲೀನ್ ಬೋಲ್ಡ್ ಆಗಿದ್ದಾಳೆ
ಈ ಮದುವೆ ನಡೆದಿರೋದು ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ. 18 ವರ್ಷದ ಹುಡುಗಿ ತನ್ನ ಅಕ್ಕನ ಗಂಡ, 55 ವರ್ಷದ ಬಾವನನ್ನು ಮದುವೆ ಆಗಿದ್ದಾಳೆ. ಅಕ್ಕನಿಗೆ ಹುಷಾರ್ ಇರಲಿಲ್ಲ. ಅವಳ ಮನೆಗೆ ಆಗಾಗ ಹೋಗ್ತಾ ಇದ್ದೆ. ಅಕ್ಕನ ಮನೆಯಲ್ಲಿ ಅಡುಗೆ ಮಾಡುವ ಜವಾಬ್ದಾರಿ ನನ್ನದಾಗಿತ್ತು. ಅಲ್ಲಿ ಬಾವ ನನ್ನನ್ನು ಹೆಚ್ಚು ಮಾತನಾಡಿಸಲು ಶುರು ಮಾಡಿದ್ರು. ಇಬ್ಬರೂ ನಿಧಾನವಾಗಿ ಹತ್ತಿರವಾಗಿದ್ದೇವೆ ಇಬ್ಬರೂ ಪ್ರೀತಿಸಲು ಶುರು ಮಾಡಿದ್ವಿ. ಈ ವಿಷ್ಯವನ್ನು ಮನೆಯವರಿಗೆ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದಿದ್ದಾಳೆ ಹುಡುಗಿ ಹೇಳಿದ್ದಾಳೆ.
ಬಾವ ಕೂಡ ನಾದಿನಿಯನ್ನು ಸಂಪೂರ್ಣ ಒಪ್ಪಿಕೊಂಡಿದ್ದಾನೆ. ಮದುವೆಗೆ ಇಬ್ಬರ ಸಹಮತ ಇದೆ. ಹುಡುಗಿ ಒತ್ತಾಯಕ್ಕೆ ಅಥವಾ ನನ್ನ ಒತ್ತಾಯಕ್ಕೆ ಈ ಮದುವೆ ನಡೆದಿಲ್ಲ ಎಂದು ಆತ ಹೇಳಿದ್ದಾನೆ. ಮಾಧ್ಯಮದವರು ವೃದ್ಧ ಎನ್ನುತ್ತಿದ್ದಂತೆ ಕೋಪಗೊಂಡ ವ್ಯಕ್ತಿ, ನನಗೆ ನೀವು ವಯಸ್ಸಾದ ವ್ಯಕ್ತಿ ಅಂದ್ರೆ ಬೇಸರವಾಗುತ್ತೆ ಎಂದಿದ್ದಾನೆ. ಆತನ ಮಾತಿಗೆ ಹೊಸ ಹೆಂಡ್ತಿ ಸಾಥ್ ನೀಡಿದ್ದಾಳೆ. ನಗ್ತಾ, ಗಂಡನ ಪರ ವಹಿಸಿದ ನವವಧು, ಬಾವನನ್ನು ನನ್ನ ದೃಷ್ಟಿಯಿಂದ ನೋಡಿದ್ರೆ ಅವರಿಗೆ ವಯಸ್ಸಾಗಿಲ್ಲ. ಕೇಲವ ಕೂದಲು ಬೆಳ್ಳಗಾಗಿದೆ. ಹೇರ್ ಡೈ ಮಾಡಿದ್ರೆ ಕಪ್ಪಾಗುತ್ತೆ. ಹಲ್ಲು ಬೆಳ್ಳಗಾಗುತ್ತೆ. ಅವರು ಸುಂದರವಾಗಿದ್ದಾರೆ, ಬುದ್ಧಿವಂತರು ಅಂತ ಹುಡುಗಿ ಗಂಡನನ್ನು ಹೊಗಳಿದ್ದಾಳೆ.






