ಇತರೆ
ಕುಂದಾಪುರ: ಬೀಜಾಡಿಯಲ್ಲಿ ಸ್ಕೂಟರ್ ಜಾರಿ ಬಿದ್ದು ಸಹೋದರಿಯರಿಗೆ ಗಾಯ
Views: 157
ಕನ್ನಡ ಕರಾವಳಿ ಸುದ್ದಿ: ಸ್ಕೂಟರ್ ಜಾರಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಬೀಜಾಡಿ ಬೈಪಾಸ್ ಬಳಿ ಸಂಭವಿಸಿದೆ.
ಸ್ಕೂಟರ್ ಚಲಾಯಿಸುತ್ತಿದ್ದ ಪಾಂಡೇಶ್ವರದ ರಮ್ಯಾ ಹಾಗೂ ಹಿಂಬದಿಯಲ್ಲಿದ್ದ ಅವರ ಅಕ್ಕ ರೂಪಾ ಗಾಯಗೊಂಡವರು. ಇಬ್ಬರನ್ನೂ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ರಮ್ಯಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






