ಸಾಂಸ್ಕೃತಿಕ

ಕಿರುತೆರೆ ನಟಿಗೆ ಫೇಸ್‌ಬುಕ್‌ನಲ್ಲಿ ಲೈಂಗಿಕ ಕಿರುಕುಳ: ವಿಕೃತ ಕಾಮಿ ಅರೆಸ್ಟ್ 

Views: 83

ಕನ್ನಡ ಕರಾವಳಿ ಸುದ್ದಿ:  ಕನ್ನಡ ಮತ್ತು ತೆಲುಗು ಕಿರುತೆರೆ ಲೋಕದಲ್ಲಿ ಜನಪ್ರಿಯವಾಗಿರುವ ನಟಿಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಕೃತ ಕಾಮುಕನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಫ್ರೆಂಡ್‌ ರಿಕ್ವೆಸ್ಟ್‌ನಿಂದ ಶುರುವಾದ ಟಾರ್ಚರ್: ಎಲ್ಲವೂ ಆರಂಭವಾಗಿದ್ದು, ಫೇಸ್‌ಬುಕ್ ಖಾತೆಯಿಂದ ಬಂದ ಒಂದು ಫ್ರೆಂಡ್‌ ರಿಕ್ವೆಸ್ಟ್‌ನಿಂದ. ನಟಿ ಅದನ್ನು ತಿರಸ್ಕರಿಸಿದ್ದೇ ತಡ, ಆರೋಪಿ ನವೀನ್ ತನ್ನ ಅಸಲಿ ಮುಖವನ್ನು ತೋರಿಸಲು ಆರಂಭಿಸಿದ್ದ. ಮೆಸೆಂಜರ್‌ನಲ್ಲಿ ಅಶ್ಲೀಲ ಸಂದೇಶ, ತನ್ನ ಗುಪ್ತಾಂಗದ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿ ವಿಕೃತಿ ಮೆರೆಯಲಾರಂಭಿಸಿದ್ದ. ಸುಮಾರು ಮೂರು ತಿಂಗಳುಗಳ ಕಾಲ ಈ ನರಕಯಾತನೆ ಮುಂದುವರಿದಿದೆ.

ನಿರಂತರ ಕಿರುಕುಳದಿಂದ ಬೇಸತ್ತ ನಟಿ, ಆರೋಪಿಗೆ ಪಾಠ ಕಲಿಸಲು ನಿರ್ಧರಿಸಿದ್ದರು. ನವೆಂಬರ್ 1 ರಂದು ನಾಗರಭಾವಿ ಬಳಿ ಆತನನ್ನು ಖುದ್ದು ಭೇಟಿಯಾಗಿ, ಈ ರೀತಿ ಅಸಭ್ಯವಾಗಿ ವರ್ತಿಸದಂತೆ ಕಠಿಣವಾಗಿ ಎಚ್ಚರಿಕೆ ನೀಡಿದ್ದರು. ಆದರೆ, ಬುದ್ಧಿವಾದ ಹೇಳಿದರೂ ಆರೋಪಿಯ ವಿಕೃತ ಮನಸ್ಥಿತಿ ಬದಲಾಗಲಿಲ್ಲ. ಆತ ಬೇರೆ ಬೇರೆ ನಕಲಿ ಖಾತೆಗಳನ್ನು ಸೃಷ್ಟಿಸಿ ತನ್ನ ಚಾಳಿಯನ್ನು ಮುಂದುವರಿಸಿದ್ದ.

ಮುಖಾಮುಖಿ ಎಚ್ಚರಿಕೆ ನೀಡಿದರೂ ಆರೋಪಿಯ ವರ್ತನೆಯಲ್ಲಿ ಬದಲಾವಣೆ ಕಾಣದಿದ್ದಾಗ, ನಟಿ ಅನಿವಾರ್ಯವಾಗಿ ಕಾನೂನಿನ ಮೊರೆ ಹೋಗಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು, ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ನವೀನ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

Related Articles

Back to top button
error: Content is protected !!