ಕಾಂತಾರ ಚಾಪ್ಟರ್–1 ಪ್ರಮುಖ ಸನ್ನಿವೇಶಗಳಲ್ಲಿ ಪ್ರತ್ಯಕ್ಷನಾಗುವ ‘ಮಾಯಕಾರ’ ಪಾತ್ರಧಾರಿ ಯಾರು? ಕೊನೆಗೂ ರಹಸ್ಯ ಬಯಲು!
Views: 100
ಕನ್ನಡ ಕರಾವಳಿ ಸುದ್ದಿ:ಕಾಂತಾರ ಚಾಪ್ಟರ್-1ರಲ್ಲಿ ಬೆರ್ಮೆ ಪಾತ್ರದ ಜತೆಗೆ ಪ್ರಮುಖ ಸನ್ನಿವೇಶಗಳಲ್ಲೆಲ್ಲ ಬಂದು ಹೋಗುವ ವಯಸ್ಸಾದ ವೃದ್ಧ ‘ಮಾಯಕಾರ’ ಪಾತ್ರದಲ್ಲಿ ನಟಿಸಿದ್ದು ಯಾರು ಎಂಬ ಪ್ರಶ್ನೆ ಕಾಡುತ್ತಿತ್ತು. ಬೇರೆ ಯಾರೋ ವಯಸ್ಸಾದ ವೃದ್ಧ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.
ರಿಷಬ್ ಮೇಕಪ್ ಆರ್ಟಿಸ್ಟ್‌ಗಳ ಕೈಚಳಕದಿಂದ ಮಾಯಾಕಾರನಾಗಿ ಬದಲಾಗುತ್ತಿರುವ ಮೇಕಿಂಗ್ ವಿಡಿಯೋ ಹೊರಬಿದ್ದಿದೆ. ಮಾಯಾಕಾರ ಚರ್ಮ ಸುಕ್ಕುಗಟ್ಟಿದ, ಬಿಳಿ ಗಡ್ಡದ, ದೊಣ್ಣೆಯ ಸಹಾಯದಿಂದ ಬಾಗಿ ನಡೆಯುವ ಹಣ್ಣು ಹಣ್ಣು ಮುದುಕನ ಪಾತ್ರವಾಗಿದೆ. ಕಾಂತಾರ ಕಾನನದಲ್ಲಿ ಆತನ ವಾಸ. ಸಾಮಾನ್ಯವಾಗಿ ಯಾರ ಕಣ್ಣಿಗೂ ಬೀಳದ ಆತ ಪ್ರಮುಖ ಸನ್ನಿವೇಶಗಳಲ್ಲಿ, ಚಿತ್ರಕ್ಕೆ ತಿರುವು ನೀಡುವ ದೃಶ್ಯಗಳಲ್ಲಿ ಮಾತ್ರ ಪ್ರತ್ಯಕ್ಷವಾಗುತ್ತಾನೆ.ಮಾಯಕಾರ ಮೇಕಿಂಗ್ ವಿಡಿಯೊದಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದು ರಿಷಬ್ ಶೆಟ್ಟಿ ಎಂದು ಅಧಿಕೃತವಾಗಿ ಮಾಹಿತಿ ನೀಡಿದೆ.

ಆತನ ಕೃಶ ದೇಹ ನೋಡಿದರೆ, ಮುಖವನ್ನು ಗಮನಿಸಿದರೆ ರಿಷಬ್ ಶೆಟ್ಟಿ ಎಂದು ಗುರುತಿಸಲು ಸಾಧ್ಯವೇ ಆಗುವುದಿಲ್ಲ. ಈ ಬದಲಾವಣೆಯ ಹಿಂದೆ 6 ಗಂಟೆಗಿಂತಲೂ ಹೆಚ್ಚಿನ ಸಮಯದ ಪರಿಶ್ರಮವಿದೆ. ಮೇಕಿಂಗ್ ವಿಡಿಯೊದಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಒಟ್ಟಾರೆಯಾಗಿ ರಿಷಬ್ ಶೆಟ್ಟಿ ಅವರು, ಬೆರ್ಮೆ ಹಾಗೂ ಮಾಯಕಾರ ಎರಡು ಪಾತ್ರದಲ್ಲಿ ನಟಿಸಿದ್ದಾರೆ.
.






