ಇನ್ಮುಂದೆ QR ಕೋಡ್ ಸ್ಕ್ಯಾನ್ ಗೆ ನೀವು ನೋಡಿದರೆ ಸಾಕು.. ಧ್ವನಿ ಮೂಲಕ ಹಣ ಪಾವತಿ! ಮೊಬೈಲ್ ಬೇಕಿಲ್ಲ
Views: 85
ಕನ್ನಡ ಕರಾವಳಿ ಸುದ್ದಿ: ಕಣ್ಣುಗಳಿಗೆ ಧರಿಸುವ ಕನ್ನಡಕದಿಂದಲೇ ಯುಪಿಐ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದಾದ ಸ್ಮಾರ್ಟ್ಗ್ಲಾಸ್ಗಳು ಕೆಲವೇ ತಿಂಗಳಲ್ಲಿ ಮಾರುಕಟ್ಟೆ ಗೆ ಬರುತ್ತಿವೆ.
ಕನ್ನಡಕ ಕಂಪನಿಯಾದ ಲೆನ್ಸ್ಕಾರ್ಟ್ (Lenskart) ಬಿ ಕ್ಯಾಮೆರಾ ಸ್ಮಾರ್ಟ್ಗ್ಲಾಸಸ್ ಇತ್ತೀಚೆಗೆ ಅನೌನ್ಸ್ ಮಾಡಿದೆ.ಇದರ ವಿಶೇಷ ಎಂದರೆ ಇದು ಯುಪಿಐ ಕ್ಯೂಆರ್ ಕೋಡ್ ಪ್ಯುಚರ್ಗಳನ್ನು ಒಳಗೊಂಡಿರಲಿದೆ. ಬಳಕೆದಾರರು ಈ ಬಿ ಕ್ಯಾಮೆರಾ ಸ್ಮಾರ್ಟ್ಗ್ಲಾಸಸ್ ಮೂಲಕ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಜೊತೆಗೆ ತಮ್ಮ ಧ್ವನಿ ದೃಢೀಕರಣ ಮೂಲಕ ಅತಿ ಬೇಗನೆ ಹಣ ಪಾವತಿ ಮಾಡಬಹುದು. ಇದಕ್ಕೆ ಮೊಬೈಲ್ ಅವಶ್ಯಕತೆನೇ ಇಲ್ಲ ಎಂದು ಹೇಳಲಾಗಿದೆ.
ಬಿ ಕ್ಯಾಮೆರಾ ಸ್ಮಾರ್ಟ್ಗ್ಲಾಸಸ್ ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (ಎನ್ಪಿಸಿಐ) ಯುಪಿಐ ಸಂಬಂಧಿಸಿವೆ. ಇವು ಎಲ್ಲ ರೀತಿಯ ಸುರಕ್ಷತೆಯೊಂದಿಗೆ ಬ್ಯಾಂಕ್ ಅಕೌಂಟ್ಗೆ ಲಿಂಕ್ ಹೊಂದಿರುತ್ತದೆ. ಸ್ಮಾರ್ಟ್ಗ್ಲಾಸ್ ಯಾವುದೇ ಹಣ ಪೋಲು ಆಗದಂತೆ ಸೆಕ್ಯೂರಿಟಿ ಹೊಂದಿವೆ. ಒಂದು ಬಾರಿ ಕನೆಕ್ಟ್ ಆದ ಮೇಲೆ ಜಸ್ಟ್ ನೀವು ನೋಡಿದರೆ ಸಾಕು ಅದರಲ್ಲಿರುವ ಕ್ಯಾಮೆರಾ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತದೆ. ಬಳಿಕ ತಮ್ಮ ಧ್ವನಿ ಮೂಲಕ ಹಣ ಪಾವತಿ ಮಾಡಬಹುದು. ಇಲ್ಲಿ ಫೋನ್ ಬಳಕೆ ಅಥವಾ ಪಿನ್ ನಂಬರ್ ಹಾಕುವ ಅವಶ್ಯಕತೆನೂ ಇಲ್ಲ.






