ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್:”ವಿಶ್ವ ಅಂಚೆ ದಿನಾಚರಣೆ”ವಿವಿಧ ಅಂಚೆ ಸೇವೆಗಳ ಕುರಿತು ವಿಶೇಷ ಮಾಹಿತಿ
"ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಪತ್ರಗಳು, ಪೋಸ್ಟ್ ಕಾರ್ಡ್, ಸ್ಪೀಡ್ ಪೋಸ್ಟ್ ಮತ್ತು ಮನಿ ಆರ್ಡರ್ಗಳಂತಹ ಸೇವೆಗಳ ಕುರಿತು ಮಾಹಿತಿ"

Views: 19
ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್, ಶಂಕರನಾರಾಯಣದಲ್ಲಿ ಅಕ್ಟೋಬರ್ 9, 2025 ರಂದು ವಿಶ್ವ ಅಂಚೆ ದಿನಾಚರಣೆ ಅಂಗವಾಗಿ ಅಂಚೆ ಸೇವೆಗಳ ಕುರಿತು ವಿದ್ಯಾರ್ಥಿಗಳಿಗಾಗಿ ವಿಶೇಷ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಾಗೂ ಕೀ ನೋಟ್ ಸ್ಪೀಕರ್ ಆಗಿ ಶ್ರೀ ಪ್ರವೀಣ ನಾಯಕ್ ಬಾಳೆಕೊಡ್ಲು, ಹಾಲಾಡಿ 76ರ ಶಾಖಾ ಪೋಸ್ಟ್ ಮಾಸ್ಟರ್ ಮತ್ತು ಜೇಸಿಐ ಶಂಕರನಾರಾಯಣ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.
ಶ್ರೀ ಪ್ರವೀಣ ನಾಯಕ್ ಅವರು ಅಂಚೆ ಇಲಾಖೆಯ ಇತಿಹಾಸ, ಅದರ ಕಾರ್ಯಪದ್ಧತಿ ಹಾಗೂ ಇಂದಿನ ಡಿಜಿಟಲ್ ಯುಗದಲ್ಲಿಯೂ ಅಂಚೆಯ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಅವರು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಪತ್ರಗಳು, ಪೋಸ್ಟ್ ಕಾರ್ಡ್, ಸ್ಪೀಡ್ ಪೋಸ್ಟ್ ಮತ್ತು ಮನಿ ಆರ್ಡರ್ಗಳಂತಹ ಸೇವೆಗಳ ಕುರಿತು ವಿವರಿಸಿದರು. ಕಾರ್ಯಕ್ರಮವನ್ನು ಇನ್ನಷ್ಟು ಆಸಕ್ತಿದಾಯಕಗೊಳಿಸಲು ಅವರು ಮಕ್ಕಳಿಗೆ ಪ್ರಶ್ನೋತ್ತರ ಮಾದರಿಯಲ್ಲಿ ಸಂವಾದ ನಡೆಸಿ, ಉತ್ತರಿಸಿದ ಮಕ್ಕಳಿಗೆ ಪ್ರೋತ್ಸಾಹದ ಬಹುಮಾನಗಳನ್ನು ನೀಡಿದರು. ಈ ಮೂಲಕ ವಿದ್ಯಾರ್ಥಿಗಳು ಅಂಚೆ ಇಲಾಖೆಯ ವಿವಿಧ ಸೇವೆಗಳ ಬಗ್ಗೆ ಪ್ರಾಯೋಗಿಕ ಅರಿವು ಪಡೆದು, ಪತ್ರ ಬರೆಯುವ ಸಂಸ್ಕೃತಿಯ ಮಹತ್ವವನ್ನು ಅರ್ಥಮಾಡಿಕೊಂಡರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳು “Through Every Envelope, The World Grows Closer” ಎಂಬ ಆಶಯವಾಕ್ಯದ ಅರ್ಥವನ್ನು ನಿಜಕ್ಕೂ ಮನಸ್ಸಿನಲ್ಲಿ ಅಳವಡಿಸಿಕೊಂಡರು.