“ತೆರೆಸಿಯನ್ಸ್ ಗಾಟ್ ಟ್ಯಾಲೆಂಟ್” ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ನಲ್ಲಿ ಕಿರಿಯ ಪ್ರತಿಭೆಗಳ ಅದ್ಭುತ ಪ್ರತಿಭಾ ಪ್ರದರ್ಶನ
“Teresians Got Talent – Shine Beyond Limits” ವೈಶಿಷ್ಟ್ಯಪೂರ್ಣ ಕಾರ್ಯಕ್ರಮ

Views: 17
ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ನ ಪ್ರಾಥಮಿಕ ವಿಭಾಗದ (3, 4 ಮತ್ತು 5ನೇ ತರಗತಿ) ವಿದ್ಯಾರ್ಥಿಗಳಿಗೆ ಅವರಲ್ಲಿ ಅಡಗಿರುವ ಸುಪ್ತ ಕಲಾ ಪ್ರತಿಭೆಯನ್ನು ಹೊರಹಾಕುವ ಉದ್ದೇಶದಿಂದ “Teresians Got Talent – Shine Beyond Limits” ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆಡಳಿತ ನಿರ್ದೇಶಕರು ಹಾಗೂ ತೀರ್ಪುಗಾರರು ನಡೆಸಿದರು. ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಯಕ್ಷ ಸಿರಿ ಶಂಕರನಾರಾಯಣದ ಶ್ರೀ ಕಿಶೋರ್ ಕುಮಾರ್ ಅರೂರ್, ಸಾಂಸ್ಕೃತಿಕ ಮತ್ತು ಭಾಷಾ ನಿರ್ದೇಶಕಿ ಅಲಿಟಾ ಡೇಸಾ, ಹಾಗೂ ನೃತ್ಯ ಗುರುಗಳಾದ ಜಗದೀಶ್ ಬನ್ನಂಜೆ ಉಪಸ್ಥಿತರಿದ್ದರು.
ತೀರ್ಪುಗಾರರಾದ ಶ್ರೀ ಕಿಶೋರ್ ಕುಮಾರ್ ಅವರು ಮಾತನಾಡಿ “ಇಂತಹ ಅವಕಾಶಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುತ್ತವೆ ಮತ್ತು ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡಲು ಪಥವನ್ನು ಸುಲಭಗೊಳಿಸುತ್ತವೆ. ಇಂತಹ ಸೃಜನಾತ್ಮಕ ವೇದಿಕೆಯನ್ನು ಸೃಷ್ಟಿಸಿರುವುದು ಸಂಸ್ಥೆಯ ಹೆಗ್ಗಳಿಕೆ” ಎಂದರು.
ಮಕ್ಕಳು ತಮ್ಮ ಸೃಜನಶೀಲತೆಯೊಂದಿಗೆ ನೃತ್ಯ, ಸಂಗೀತ, ನಾಟಕ, ವಾದ್ಯಗಾನ ಇತ್ಯಾದಿ ವಿಭಿನ್ನ ಕಲಾರೂಪಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಪ್ರತಿಯೊಂದು ಪ್ರದರ್ಶನವೂ ಮಕ್ಕಳಲ್ಲಿರುವ ಅಸಾಧಾರಣ ಸಾಮರ್ಥ್ಯವನ್ನು ತೋರಿಸಿಕೊಟ್ಟಿತು. “ಮಕ್ಕಳಿಗೆ ವೇದಿಕೆ ಸಿಕ್ಕರೆ ಪ್ರತಿಯೊಬ್ಬ ಮಗು ಕಲಾವಿದ” ಎಂಬ ಮಾತು ನಿಜವಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವವರನ್ನು ಸಂಯೋಜಕಿ ಶ್ರೀಮತಿ ದಿವ್ಯಾ ಪೂಜಾರಿ ಸ್ವಾಗತಿಸಿದರು. ಮಕ್ಕಳು ತೋರಿದ ಪ್ರತಿಭೆಗೆ ಪೋಷಕರು, ಶಿಕ್ಷಕರು ಹಾಗೂ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
“Teresians Got Talent” ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಯಲು ಪ್ರೋತ್ಸಾಹಿಸಿದ ಮನಮುಟ್ಟುವ ಸಾಂಸ್ಕೃತಿಕ ವೇದಿಕೆಯಾಗಿ ಯಶಸ್ವಿಯಾಗಿ ನೆರವೇರಿತು.