ಶಿಕ್ಷಣ

ಪರೀಕ್ಷಾ ಕಾರ್ಯದಲ್ಲಿರುವ ಪಿಯು ಉಪನ್ಯಾಸಕರಿಗೆ ಸಮೀಕ್ಷೆಗೆ ಸೂಚನೆ: ಆಕ್ರೋಶ ಹೊರ ಹಾಕಿದ ಉಪನ್ಯಾಸಕರು

Views: 53

ಕನ್ನಡ ಕರಾವಳಿ ಸುದ್ದಿ: ಪಿಯುಸಿ ಮಧ್ಯವಾರ್ಷಿಕ ಪರೀಕ್ಷಾ ಕಾರ್ಯದಲ್ಲಿರುವ ಉಪನ್ಯಾಸಕರಿಗೆ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಡಿಡಿಪಿಯು ಹಾಗೂ ತಹಶೀಲ್ದಾರರ ಮೂಲಕ ಸೂಚಿಸಲಾಗಿದೆ.ಇದರಿಂದ ಗೊಂದಲ ಏರ್ಪಟ್ಟಿದ್ದು, ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಅಕ್ಟೋಬರ್ 18 ರವರೆಗೂ ಸಮೀಕ್ಷೆ ವಿಸ್ತರಿಸಿದ್ದು, ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯ ಹೊಣೆ ಹೊಂದಿರುವ ಉಪನ್ಯಾಸಕರನ್ನು ಇದರಲ್ಲಿ ತೊಡಗಿಸಿಕೊಳ್ಳದಂತೆ ಸೂಚಿಸಲಾಗಿತ್ತು. ಅದಾಗ್ಯೂ ಜಿಲ್ಲೆಯ ಉಪ ನಿರ್ದೇಶಕರು ಸಮೀಕ್ಷೆ ಕಾರ್ಯ ಮಾಡುವಂತೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಸೂಚಿಸಿದ್ದಾರೆ. ಇದರಿಂದ ಗೊಂದಲ ಏರ್ಪಟ್ಟಿದೆ.

ಉಪನ್ಯಾಸಕರು ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳಲೇಬೇಕು ಎಂಬ ನೆಲೆಯಲ್ಲಿ ಮುಖ್ಯಮಂತ್ರಿಗಳು ಖುದ್ದು ಸಮೀಕ್ಷೆ ಕಾರ್ಯದಲ್ಲಿ ವಿನಾಯಿತಿ ನೀಡಿದ್ದರು. ಆದರೆ ಜಿಲ್ಲೆಗಳಲ್ಲಿ ನಿಗದಿತ ದಿನಾಂಕದೊಳಗೆ ಸಮೀಕ್ಷೆ ಕಾರ್ಯ ಮುಗಿಯುವುದು ಕಷ್ಟ ಎಂಬ ಕಾರಣಕ್ಕೆ ಪರೀಕ್ಷೆ ಪಾಳಿಯಲ್ಲಿರುವ ಉಪನ್ಯಾಸಕರಿಗೂ ಸಮೀಕ್ಷೆಯ ಒತ್ತಡ ಹೇರಲಾಗುತ್ತಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಮೇಲೆ ಮತ್ತು ಉಪನ್ಯಾಸಕರ ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ಉಪನ್ಯಾಸಕರು.

ಸಮೀಕ್ಷೆಯಲ್ಲಿರುವ ಎಲ್ಲ ಪ.ಪೂ ಕಾಲೇಜುಗಳ ಉಪನ್ಯಾಸಕರು ತಮ್ಮ ಪ್ರಾಂಶುಪಾಲರು ಮಧ್ಯವಾರ್ಷಿಕ ಪರೀಕ್ಷಾ ಕಾರ್ಯಕ್ಕೆ ಸೂಚಿಸಿದ ದಿನಗಳಲ್ಲಿ ಪರೀಕ್ಷಾ ಕಾರ್ಯ ನಡೆಸಬೇಕು ಹಾಗೂ ಉಳಿದ ದಿನಗಳಲ್ಲಿ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಪಿಯು ಮಧ್ಯವಾರ್ಷಿಕ ಪರೀಕ್ಷೆ ಯು ಅ.9ರಂದು ಆರಂಭವಾಗಿದ್ದು ಅ.18 ರವರೆಗೂ ಇರಲಿದೆ. ರಾಜ್ಯ ಸರಕಾರವೂ ಅ.18ರೊಳಗೆ ಸಮೀಕ್ಷೆ ಸೂಚಿಸಿದೆ. ಪೂರ್ಣಗೊಳಿಸಲು ಆದೇಶ ನೀಡಿದ್ದೆ ವಿಳಂಬವಾಗಿತ್ತು. ಪಿಯು ಉಪನ್ಯಾಸಕರಿಗೆ ಸಮೀಕ್ಷೆಗೆ ಇದನ್ನೇ ಆರಂಭದಲ್ಲಿ ನೀಡಿದ್ದರೆ ಈಗ ಇಷ್ಟು ಸಮಸ್ಯೆಯಾಗುತ್ತಿರಲಿಲ್ಲ. ಪರೀಕ್ಷೆ ಪಾಳಿಯ ಜತೆಗೆ ಸಮೀಕ್ಷೆ ಮಾಡುವುದು ಕಷ್ಟ ಅಲ್ಲದೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಮಾಡಬೇಕು. ಬೋಧಕರ ಮೇಲೆ ಇಂಥ ಹೊರೆ ಸರಿಯಲ್ಲ ಎಂದು ಉಪನ್ಯಾಸಕರು ಆಕ್ರೋಶ ಹೊರ ಹಾಕಿದ್ದಾರೆ.

Related Articles

Back to top button