ಕರಾವಳಿ

ಕಾಪು ಬೀಚ್ ನಲ್ಲಿ ಮುತ್ತು ಕೊಟ್ಟ ವ್ಯಕ್ತಿಯ ವಿರುದ್ದ ಪೋಕ್ಸೋ ಕೇಸ್ ದಾಖಲು

Views: 197

ಕನ್ನಡ ಕರಾವಳಿ ಸುದ್ದಿ: ತಂದೆ – ತಾಯಿ ಜತೆಗೆ ಮೈಸೂರಿನಿಂದ ಕಾಪು ಬೀಚ್ ಗೆ ಬಂದಿದ್ದ ಹದಿನೈದರ ಹರೆಯದ ಬಾಲಕನಿಗೆ ಮುತ್ತು ನೀಡಿದ ಆರೋಪದಲ್ಲಿ ಉಳ್ಳಾಲದ ವ್ಯಕ್ತಿಯ ವಿರುದ್ಧ ಕಾಪು ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಬಾಲಕ ಮತ್ತು ಆತನ ಮನೆಯವರು ಬುಧವಾರ ಸಂಜೆ ಬೀಚ್ ನಲ್ಲಿ ಸುತ್ತಾಡುತ್ತಿದ್ದಾಗ ಶೌಚಾಲಯ ಬಳಿ ಬಂದ ಆರೋಪಿ ಶೌಕತ್ ಅಲಿ (47) ಬಾಲಕನಿಗೆ ಮುತ್ತು ಕೊಟ್ಟಿದ್ದನು. ಇದನ್ನು ಗಮನಿಸಿದ ಬಾಲಕನ ತಂದೆ ಬೊಬ್ಬೆ ಹೊಡೆದಿದ್ದು ಆರೋಪಿ ಸ್ಥಳದಿಂದ ಪರಾರಿಯಾಗಲೆತ್ನಿಸಿದ್ದಾನೆ. ಈ ವೇಳೆ ಗಸ್ತು ನಿರತ ಪೊಲೀಸರು ಮತ್ತು ಸಾರ್ವಜನಿಕರು ಜತೆ ಸೇರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಹದಿನೈದು ದಿನ ನ್ಯಾಯಾಂಗ ವಿಧಿಸಿದೆ ಎಂದು ತಿಳಿದು ಬಂದಿದೆ.

Related Articles

Back to top button