ಸಾಂಸ್ಕೃತಿಕ

ಒಂದೇ ವಾರದಲ್ಲಿ ದಾಖಲೆಯ ಭರ್ಜರಿ ಕಲೆಕ್ಷನ್ ಮಾಡಿದ ‘ಕಾಂತಾರ ಚಾಪ್ಟರ್ 1’

Views: 127

ಕನ್ನಡ ಕರಾವಳಿ ಸುದ್ದಿ: ಹೊಂಬಾಳೆ ಫಿಲ್ಮ್ ನಿರ್ಮಾಣದ, ರಿಷಬ್‌ ಶೆಟ್ಟಿ ಅಭಿನಯದ ʼಕಾಂತಾರ ಚಾಪ್ಟರ್‌ 1′ ಗ್ಲೋಬಲ್‌ ಹಿಟ್‌ ಆಗಿದೆ. ರಾಜ್ಯ, ದೇಶೀಯ ಹಾಗೂ ಅಂತಾರಾಷ್ಟ್ರೀಯ ಗಲ್ಲಾಫೆಟ್ಟಿಗೆಯಲ್ಲಿ ದಾಖಲೆಗಳ ಮೇಲೆ ದಾಖಲೆಗನ್ನು ಉಡೀಸ್‌ ಮಾಡುತ್ತಲೇ ಸಾಗಿದೆ. ‘

ಬಿಡುಗಡೆಯಾದ ಅಕ್ಟೋಬರ್ 2 ದಿನಾಂಕದಿಂದ ಇಲ್ಲಿಯವರೆಗೆ ವಿಶ್ವಾದ್ಯಂತ ₹ 509 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸಿದೆ. ಬಿಡುಗಡೆ ಆದ ಎಂಟು ದಿನಗಳಲ್ಲಿ 2022ರ ‘ಕಾಂತಾರ’ ಮತ್ತು ‘ಕೆಜಿಎಫ್ 1’ ಸಿನಿಮಾದ ಕಲೆಕ್ಷನ್ ದಾಖಲೆಗಳನ್ನು ಮುರಿದಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಂದೇ ವಾರಕ್ಕೆ 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಮತ್ತು ಕನ್ನಡದ ಮೊದಲ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಸಿನಿಮಾ ‘ಕೆಜಿಎಫ್ 1’ ದಾಖಲೆಗಳನ್ನು ಹಿಂದಿಕ್ಕಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದಲ್ಲಿ ಎಂಟು ದಿನಗಳಲ್ಲಿ ಸುಮಾರು 350 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಸುಮಾರು 509 ಕೋಟಿ ಗಳಿಕೆ ಮಾಡಿದೆ.

2022ರ ‘ಕಾಂತಾರ’ ಸಿನಿಮಾ ವಿಶ್ವದಾದ್ಯಂತ 450 ಕೋಟಿ ಗಳಿಕೆ ಮಾಡಿತ್ತು. 2018 ರಲ್ಲಿ ಬಿಡುಗಡೆ ಆಗಿದ್ದ ‘ಕೆಜಿಎಫ್ 1’ ಸಿನಿಮಾ 250 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೇವಲ ಒಂದು ವಾರದಲ್ಲಿ ಎರಡೂ ಸಿನಿಮಾಗಳ ದಾಖಲೆಗಳನ್ನು ಅಳಿಸಿ ಹಾಕಿದೆ. ಮಾತ್ರವಲ್ಲದೆ ರಜನೀಕಾಂತ್ರ ‘ಕೂಲಿ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನೂ ಸಹ ಹಿಂದಿಕ್ಕಿ ಮುಂದೆ ನುಗ್ಗುತ್ತಿದೆ. ಕಾಂತಾರ ಚಾಪ್ಟರ್ 1 ಸಿನಿಮಾಕ್ಕೆ ಸುಮಾರು 125 ಕೋಟಿ ರೂಪಾಯಿ ಬಜೆಟ್ ಅನ್ನು ಹೊಂಬಾಳೆ ಫಿಲಮ್ಸ್ ಹಾಕಿದೆ. ಸುಮಾರು 800 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡುವ ಅಂದಾಜಿದೆ.

Related Articles

Back to top button
error: Content is protected !!