ಬಸ್ರೂರು ಶ್ರೀ ಶಾರದಾ ಕಾಲೇಜು: ಮಳೆ ನೀರು ಕೊಯ್ಲು ಮತ್ತು ಮಲಿನ ನೀರಿನ ಪುನರ್ಬಳಕೆ ಪ್ರಾತ್ಯಕ್ಷಿಕೆ

Views: 27
ಬಸ್ರೂರು: ಶ್ರೀ ಶಾರದಾ ಕಾಲೇಜು ಬಸ್ರೂರು, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಉಡುಪಿ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಬಸ್ರೂರು ಇವುಗಳ ಜಂಟಿ ಆಶ್ರಯದಲ್ಲಿ ಮಳೆ ನೀರು ಕೊಯ್ಲು ಮತ್ತು ಮಲಿನ ನೀರಿನ ಪುನರ್ಬಳಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರತ್ನಶ್ರೀ ಜೋಸೆಫ್ ಜಿಎಂ ರೇಬಲೋ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ತರಬೇತುದಾರರು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮಾತನಾಡಿ ಮಳೆ ನೀರು ಕೊಯ್ಲಿನ ಪ್ರಯೋಜನ ಹಾಗೂ ಮಲಿನ ನೀರಿನ ಪುನರ್ಬಳಕೆ ಕುರಿತು ಪ್ರಾತೃಕ್ಷತೆ ಮತ್ತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಬಸ್ರೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಚಂದ್ರ ಬಿಲ್ಲವ ಜಿಲ್ಲಾ ಪಂಚಾಯತ್ ಉಡುಪಿ ಜೆಜೆಎಂ ಹೆಚ್ ಆರ್ ಡಿ ಸಂಯೋಜಕ ಶ್ರೀ ಸಂತೋಷ್ ಕೆ ಉಪಸ್ಥಿತರಿದ್ದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ವಹಿಸಿದ್ದರು .
ಕಾರ್ಯಕ್ರಮ ಸಂಯೋಜಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ. ರವಿಚಂದ್ರ ಸ್ವಾಗತಿಸಿ ಪ್ರಾಸ್ತಾಪಿಸಿದರು.
ವಿದ್ಯಾರ್ಥಿನಿ ಪಲ್ಲವಿ ಪ್ರಾರ್ಥಿಸಿ, ಚೈತನ್ಯ ಪ್ರಥಮ ಬಿಸಿಎ ನಿರೂಪಿಸಿದರು. ಎನ್ಎಸ್ಎಸ್ ಸಹ ಯೋಜನಾ ಅಧಿಕಾರಿ ಮನವಿ ಕೆ ಕೆ ವಂದಿಸಿದರು .