ಕುಂದಾಪುರ: ವಕ್ವಾಡಿ ಸೇತುವೆ ಬಳಿ ಬೈಕ್‌ಗೆ ಕಾರು ಡಿಕ್ಕಿ, ಹೊಳಗೆ ಬಿದ್ದ ಬೈಕ್ ಸವಾರ
Views: 1027
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ರಸ್ತೆಯ ಸೇತುವೆ ಬಳಿ ಓಮಿನಿ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಹೊಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಸೆ. 30ರಂದು ಮಂಗಳವಾರ ಸಂಜೆ ಆರು ಗಂಟೆ ಹೊತ್ತಿಗೆ ವಕ್ವಾಡಿಯಿಂದ ಕೋಟೇಶ್ವರದ ಕಡೆಗೆ ವಿಕ್ರಮ್ ಶೇಟ್ ಎನ್ನುವವರು ಓಮಿನಿ ಕಾರನ್ನು ಚಲಾಯಿಸಿಕೊಂಡು ಹೋಗುವಾಗ ವಕ್ವಾಡಿ ಸೇತುವೆ ಬಳಿ ಅಡ್ಡ ಬಂದ ಹಾವೊಂದನ್ನು ತಪ್ಪಿಸಲು ಹೋಗಿ ಎದುರುಗಡೆಯಿಂದ ಬೈಕ್ ನಲ್ಲಿ ಬರುತ್ತಿದ್ದ ತೆಕ್ಕಟ್ಟೆ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಾಹನದ ಡ್ರೈವರ್ ಕೃಷ್ಣ ಅವರ ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಹೊಳಗೆ ಬಿದ್ದಿದ್ದಾರೆ.
ಕೂಡಲೇ ಕಾರಿನ ಡ್ರೈವರ್ ವಿಕ್ರಮ್ ರಕ್ಷಣೆಗೆಂದು ಹೊಳೆಗೆ ಇಳಿದು ರಕ್ಷಿಸಲು ಹೋದಾಗ ನೀರಿನಲ್ಲಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದ್ದರು. ಸ್ಥಳೀಯರಾದ ಸದಾಶಿವ ಶೆಟ್ಟಿಗಾರ್ ಮತ್ತು ಶಂಕರ್ ಪೂಜಾರಿ ಹೊಳೆಗೆ ಇಳಿದು ಇಬ್ಬರನ್ನೂ ರಕ್ಷಿಸಿದ್ದಾರೆ.ತಲೆ, ಕೈ ಕಾಲುಗಳಿಗೆ ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.








