ಇತರೆ

ತೆಕ್ಕಟ್ಟೆ- ಕನ್ನುಕೆರೆಯಲ್ಲಿ ಮನೆಯ ಹಿಂಬದಿಯ ಹಂಚು ಕಿತ್ತು ನಗದು ಮತ್ತು ಚಿನ್ನಾಭರಣ ಕಳವು

Views: 153

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಕನ್ನುಕೆರೆಯ ಶರತ್‌ ಎಂಬುವರ ಮನೆಯ ಹಿಂಬದಿಯ ಹಂಚು ಕಿತ್ತು ಒಳನುಗ್ಗಿ ನಗದು ಮತ್ತು ಚಿನ್ನಾಭರಣ ಕಳವು ಮಾಡಿದ ಘಟನೆ ಸೆ. 28 ರಂದು ರಾತ್ರಿ ವೇಳೆ ನಡೆದಿದೆ.

ಶರತ್ ಅವರು ಸೆ.28 ರಂದು ರಾತ್ರಿ ಊಟ ಮಾಡಿ ಮಲಗಿದ್ದರು. ಸೆ.29 ರಂದು ಬೆಳಿಗ್ಗೆ 7:30 ಕ್ಕ ಏಳುವಾಗ ಯಾರೋ ಕಳ್ಳರು ಮನೆಯ ಮಾಡಿನ ಹಂಚನ್ನು ತೆಗೆದು ಮನೆ ಒಳಪ್ರವೇಶಿಸಿ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಅಕ್ರಮವಾಗಿ ಪ್ರವೇಶಿಸಿದ ಕಳ್ಳರು ಗೋದ್ರೇಜ್‌ ನಲ್ಲಿದ್ದ ಕೀ ಯನ್ನು ಬಳಸಿ ಗೋದ್ರೇಜ್‌ ನ ಒಳಗಡೆ ಇಟ್ಟಿದ್ದ ರೂಪಾಯಿ 18,000/- ನಗದು, 3 ಗ್ರಾಂ ತೂಕದ ಒಂದು ಚಿನ್ನದ ಉಂಗುರ ಹಾಗೂ ಮಗುವಿನ ಬೆಳ್ಳಿಯ ಬಳೆ, ಕಾಲುಂಗುರ , ಸೊಂಟದ ಉಡಿದಾರ ಕಳವು ಮಾಡಿಕೊಂಡು ಹೋಗಿರುವುದಾಗಿ ಶರತ್ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!