ಇತರೆ

ಆವರ್ಸೆಯಲ್ಲಿ ವ್ಯಕ್ತಿ ಆತ್ಮಹತ್ಯೆ: ಸಾವಿನ ಬಗ್ಗೆ ಸಂಶಯ..! ದೂರು 

Views: 149

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಆವರ್ಸೆಯಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಘಟನೆಗೆ ಸಾವಿನ ಮೇಲೆ ಸಂಶಯ ವ್ಯಕ್ತವಾಗಿದೆ.

ಆತ್ಮಹತ್ಯೆ ಮಾಡಿಕೊಂಡವರು ರಾಘವೇಂದ್ರ(32) ಎಂದು ತಿಳಿಯಲಾಗಿದೆ.

ರಾಘವೇಂದ್ರ ಅವರ ಸಾವಿನ ಬಗ್ಗೆ ಅವರ ಅಣ್ಣ ರವೀಂದ್ರ ಕುಮಾರ್ ಸಂಶಯ ವ್ಯಕ್ತಪಡಿಸಿ ಕೋಟ ಪೊಲೀಸರಿಗೆ ತನಿಖೆ ಮಾಡುವಂತೆ ದೂರು ನೀಡಿದ್ದಾರೆ.

ಮೃತರ ಹೆಂಡತಿ ಮನೆಯಾದ ಆವರ್ಸೆಯಲ್ಲಿ ಸುಮಾರು 12 ವರ್ಷಗಳಿಂದ ಅವರ ಹೆಂಡತಿ ಮಾಲತಿ ರವರ ತಂದೆ ರಾಮ ಬೆಳಾರೆ ರವರ ಮನೆಯಲ್ಲಿ ವಾಸವಿರುತ್ತಾರೆ. ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ರಾಘವೇಂದ್ರನು ಕುಡಿದು ಬಂದು ಗಲಾಟೆ ಮಾಡಿದ ಬಗ್ಗೆ ಠಾಣೆಯಲ್ಲಿ ಆತನ ಹೆಂಡತಿ ದೂರು ದಾಖಲಿಸಿದ್ದು, ಅವನಿಗೆ ಬುದ್ದಿಮಾತು ಹೇಳಿ ಕಳುಹಿಸಿರುತ್ತಾರೆ. ರಾಘವೇಂದ್ರ ರವರಿಗೆ 7 ವರ್ಷಗಳ ಹಿಂದೆ ಹೊಟ್ಟೆ ನೋವು ಎಂದು ಹೇಳಿ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಹೆಂಡತಿ ಮನೆಯಲ್ಲಿ ನೇಣು ಹಾಕಿಕೊಂಡಿರುವುದಾಗಿ ಮೃತರ ಹೆಂಡತಿಯ ಅಕ್ಕ ಶರಾವತಿ ಎಂಬುವವರು ಕರೆಮಾಡಿ ತಿಳಿಸಿರುತ್ತಾರೆ.

ಮೃತ ಶರೀರವನ್ನು ಯಾವುದೇ ಮಾಹಿತಿ ನೀಡದೇ ಏಕಾಏಕಿ ಇಳಿಸಿ ಆವರ್ಸೆ ಪಿಹೆಚ್ ಸಿ ಗೆ ಕರೆದುಕೊಂಡು ಹೋಗಿರುವುದಾಗಿದೆ ಆದ್ದರಿಂದ ರಾಘವೇಂದ್ರರವರ ಸಾವಿನ ಮೇಲೆ ಸಂಶಯವಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button
error: Content is protected !!