ಅನ್ನಭಾಗ್ಯ ಅಕ್ಕಿ ಜತೆಗೆ ಆಹಾರ ಕಿಟ್ ಪೂರೈಕೆಗೆ ಸೂಚನೆ!

Views: 159
ಕನ್ನಡ ಕರಾವಳಿ ಸುದ್ದಿ: ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜತೆಗೆ ‘ಆಹಾರ ಕಿಟ್’ ವಿತರಿಸುವ ಚಿಂತನೆ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯ, ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗೃಹಕಚೇರಿ’ ಕೃಷ್ಣಾ’ದಲ್ಲಿ ಬುಧವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಉದ್ದೇಶಿತ ಅನ್ನಭಾಗ್ಯ ಯೋಜನೆ ಅಡಿ ಪೌಷ್ಟಿಕ ಧಾನ್ಯ, ಅಗತ್ಯ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಒದಗಿಸುವ ಕುರಿತು ಪರಿಶೀಲಿಸುವ ಅಗತ್ಯವಿದೆ. ಆದ್ದರಿಂದ ಆ ಈ ಕುರಿತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಹಿಂದೆ ಎಲ್ಲ ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರಿಗೆ ಪೌಷ್ಟಿಕ ವಸ್ತುಗಳನ್ನು ಒಳಗೊಂಡು ಇಂದಿರಾ ಆಹಾರ ಕಿಟ್ ಗಳನ್ನು ಈ ಪೈಕಿ ಕೇಂದ್ರ ಹಾಗೂ ರಾಜ್ಯ ಪ್ರತಿ ತಿಂಗಳು ವಿತರಿಸಲು ಸರಕಾರದಿಂದ ತಲಾ 5 ಕೆಜಿ ನೀಡಲು ಉದ್ದೇಶಿಸಿತ್ತು. ಅದು ಕೇವಲ ಪ್ರಸ್ತಾವನೆಯಾಗಿಯೇ ಉಳಿದಿತ್ತು
ಅನ್ನಭಾಗ್ಯ ಅಕ್ಕಿ ಜೊತೆಗೆ ಆಹಾರ ಆಹಾರ ಕಿಟ್ಅನ್ನಭಾಗ್ಯ ಯೋಜನೆಯ ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ ನೀಡಲಾಗುವ “ಇಂದಿರಾ ಆಹಾರ ಕಿಟ್” ಒಂದು ಪ್ರಸ್ತಾವಿತ ಯೋಜನೆಯಾಗಿದೆ, ಇದರಲ್ಲಿ 2 ಕೆಜಿ ಗೋಧಿ, 1 ಕೆಜಿ ತೊಗರಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು, 100 ಗ್ರಾಂ ಚಹಾ ಪುಡಿ ಮತ್ತು 50 ಗ್ರಾಂ ಕಾಫಿ ಪುಡಿ ಇರಲಿದೆ. ಈ ಕಿಟ್ ಬಿಪಿಎಲ್ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವ ಉದ್ದೇಶವಾಗಿದೆ.






