ಆರೋಗ್ಯ

ಕರ್ನಾಟಕದಲ್ಲಿ ಮೊದಲ ಎಬೋಲಾ ವೈರಸ್ ಪತ್ತೆ? ಉಗಾಂಡಾ ಮಹಿಳೆ ಆಸ್ಪತ್ರೆಗೆ ದಾಖಲು 

Views: 67

ಕನ್ನಡ ಕರಾವಳಿ ಸುದ್ದಿ: ಜಗತ್ತಿನಲ್ಲಿ ಎಬೋಲಾ ರೋಗ ಭೀತಿ ಆವರಿಸಿದೆ. ಇದರ ನಡುವೆ ಇದೇ ವೈರಸ್‌ನ ಲಕ್ಷಣಗಳಿದ್ದ ಉಗಾಂಡಾದ 28 ವರ್ಷದ ಮಹಿಳೆಯನ್ನು ಮಂಗಳವಾರ ಬೆಂಗಳೂರಿನ ಸರ್ಕಾರಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಬೋಲಾ ಪೀಡಿತ ಪ್ರದೇಶದಿಂದ ಬಂದಿದ್ದ ಈ ಮಹಿಳೆಗೆ ಮೈ ಕೈ ನೋವಿನಂತಹ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಹೋಟೆಲ್‌ನಿಂದ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದೀಗ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಹಿಳೆಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ)ಗೆ ಕಳುಹಿಸಲಾಗಿದೆ. ವರದಿಗೆ ಕಾಯುತ್ತಿದ್ದೇವೆ. ಶಿಷ್ಟಾಚಾರದಂತೆ ಮತ್ತೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಆರೋಗ್ಯ ಅಧಿಕಾರಿಗಳು ಸೋಂಕಿತ ಮಹಿಳೆಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇತ್ತೀಚೆಗೆ ಆಕೆ ಎಬೋಲಾ ಪೀಡಿತ ಪ್ರದೇಶದಿಂದ ಪ್ರಯಾಣಿಸಿದ್ದು, ನಂತರ ಮೈ ಕೈ ನೋವಿನಂತಹ ಲಕ್ಷಣಗಳು ಕಾಣಿಸಿವೆ. ಹೀಗಾಗಿ, ಮುನ್ನೆಚ್ಚರಿಕೆಯಿಂದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

 

Related Articles

Back to top button
error: Content is protected !!